ಮಡಿಕೇರಿ, ಜು. ೧೦: ೨೦೨೨-೨೩ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವೃಂದದ ಕೋರಿಕೆ ವರ್ಗಾವಣೆ/ಪರಸ್ಪರ ವರ್ಗಾವಣೆ/ಕನಿಷ್ಠ ಅವಧಿ ಮುಗಿದ ನಿರ್ದಿಷ್ಟಪಡಿಸಿದ ಮತ್ತು ತಾಂತ್ರಿಕ ಸಹಾಯಕರ ಆನ್ಲೈನ್ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸಬೇಕಿರುತ್ತದೆ.
ಅದರಂತೆ ಕೊಡಗು ಜಿಲ್ಲೆಯಲ್ಲಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವೃಂದದ ಕೋರಿಕೆ ವರ್ಗಾವಣೆ /ಪರಸ್ಪರ ವರ್ಗಾವಣೆ/ ಕನಿಷ್ಟ ಅವಧಿ ಮುಗಿದ ನಿರ್ದಿಷ್ಟಪಡಿಸಿದ ಮತ್ತು ತಾಂತ್ರಿಕ ಸಹಾಯಕರುಗಳಿಗೆ ಆನ್ಲೈನ್ ಕೌನ್ಸಿಲಿಂಗ್ ತಾ. ೧೧ರ ಬೆಳಿಗ್ಗೆ ೧೦ ಗಂಟೆಯಿAದ ತಾ.೧೭ ರವರೆಗೆ ನಡೆಯಲಿದೆ. ವೇಳಾಪಟ್ಟಿಯನುಸಾರ ಸಂಬAಧಿಸಿದ ಶಿಕ್ಷಕರು ನಿಗದಿತ ದಿನಾಂಕದAದು ಕೌನ್ಸಿಲಿಂಗ್ಗೆ ಹಾಜರಾಗುವಂತೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಸಿ.ರಂಗಧಾಮಯ್ಯ ತಿಳಿಸಿದ್ದಾರೆ.