ಮಡಿಕೇರಿ, ಜು. ೧೦: ಕರ್ನಾಟಕ ರಾಜ್ಯ ಸರ್ಕಾರದ ಅಭಿಯೋಜಕರಾಗಿ ಕೊಡಗು ಮೂಲದ ಬಲ್ಲಚಂಡ ಎ. ಬೆಳ್ಳಿಯಪ್ಪ ಅವರನ್ನು ಸರ್ಕಾರ ನೇಮಕ ಮಾಡಿದೆ. ಮೂಲತಃ ಮೂರ್ನಾಡು ಕಿಗ್ಗಾಲು ಗ್ರಾಮದವರಾಗಿದ್ದು, ಪ್ರಸ್ತುತ ಬೆಂಗಳೂರಿನ ಹಲಸೂರಿನಲ್ಲಿ ವಾಸವಿರುವ ಬೆಳ್ಳಿಯಪ್ಪ ಅವರು ಈ ಹಿಂದೆ ಸರ್ಕಾರಿ ವಕೀಲರಾಗಿ, ಲೋಕಾಯುಕ್ತ ವಿಭಾಗದಲ್ಲಿ ವಿಶೇಷ ಅಭಿಯೋಜಕರಾಗಿಯೂ ಕರ್ತವ್ಯ ನಿರ್ವಹಿಸಿದ್ದರು.