ಮಡಿಕೇರಿ, ಜು. ೧೦: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಜನವರಿಯಿಂದ ಈತನಕ ಸರಾಸರಿ ೩೨.೭೪ ಇಂಚು ಮಳೆಯಾಗಿದೆ.

ಈ ಬಾರಿ ವಾಡಿಕೆಯಂತೆ ಮುಂಗಾರುಮಳೆ ತಡವಾಗಿ ಆರಂಭಗೊAಡಿದ್ದರೂ ಈ ಹಿಂದಿನ ವರ್ಷಗಳಂತೆ ಹೆಚ್ಚಿನ ಬಿರುಸು ಕಂಡುಬರುತ್ತಿಲ್ಲ. ಕಳೆದ ಬುಧವಾರ ಹಾಗೂ ಗುರುವಾರದಂದು ಮಾತ್ರ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದ್ದು, ನಂತರದಲ್ಲಿ ಮತ್ತೆ ಇಳಿಮುಖಗೊಂಡAತಿದೆ. ಆದರೆ ಜಿಲ್ಲೆಯ ಮಟ್ಟಿಗೆ ಸದ್ಯಕ್ಕೆ ಇಷ್ಟು ಮಳೆಯಾಗಿರುವುದು ಆಶಾದಾಯಕವೆನ್ನಬಹುದು ಎಂದು ರೈತರು ಒಂದಷ್ಟು ತೃಪ್ತಿ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ವರ್ಷ ಜನವರಿಯಿಂದ ಈತನಕ ೫೧.೨೬ ಇಂಚಿನಷ್ಟು ಮಳೆಯಾಗಿದ್ದು, ಈ ಬಾರಿ ಪ್ರಮಾಣ ೧೮.೫೨ ಇಂಚಿನಷ್ಟು ಕಡಿಮೆಯಾಗಿದೆ.

ಮಡಿಕೇರಿ ತಾಲೂಕಿಗೆ ಈ ಬಾರಿ ಜನವರಿಯಿಂದ ಈತನಕ ೫೦.೯೨, ವೀರಾಜಪೇಟೆಯಲ್ಲಿ ೨೩.೮೭ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ೨೩.೪೨ ಇಂಚು ಮಳೆಯಾಗಿದೆ. ೨೦೨೨ರಲ್ಲಿ ಈ ಪ್ರಮಾಣ ಮಡಿಕೇರಿ ತಾಲೂಕಿನಲ್ಲಿ ೭೫.೩೧, ವೀರಾಜಪೇಟೆ ೪೦.೪೦ ಹಾಗೂ ಸೋಮವಾರಪೇಟೆಯಲ್ಲಿ ೩೮.೦೭ ಇಂಚಿನಷ್ಟಾಗಿತ್ತು.

ಪ್ರಸ್ತುತ ಮೋಡಕವಿದ ವಾತಾವರಣ ಕಂಡುಬರುತ್ತಿದೆಯಾದರೂ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಮಾತ್ರ ಮಳೆಯಾಗುತ್ತಿದೆ. ಭಾನುವಾರ ಹಾಗೂ ಸೋಮವಾರದಂದು ಜಿಲ್ಲೆಯಲ್ಲಿ ಮಳೆ ಇಳಿಮುಖವಾದಂತಿತ್ತು.