*ಗೋಣಿಕೊಪ್ಪ, ಜು. ೧೦ : ನಮ್ಮನ್ನು ಗುರುತಿಸುವಷ್ಟು ಬೆಳೆಯಲು ವಿದ್ಯಾರ್ಥಿಗಳಿಗೆ ಅವಕಾಶವಿದೆ ಎಂದು ಅಂರ್ರಾಷ್ಟಿçÃಯ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅಭಿಪ್ರಾಯಪಟ್ಟರು.
ಕಾಲ್ಸ್ ಶಾಲೆಯಲ್ಲಿ ಆಯೋಜಿ ಸಿದ್ದ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿದ್ಯಾರ್ಥಿ ನಾಯಕರು ಗಳಿಗೆ ಗೌರವ ಅರ್ಪಿಸಿ ಮಾತನಾಡಿ ದರು. ವಿದ್ಯಾರ್ಥಿ ಜೀವನದಲ್ಲಿ ನಾಯಕರಾಗಿ ಜವಾಬ್ದಾರಿ ನಿಭಾಯಿಸು ವಾಗ ಹೆಚ್ಚು ನಂಬಿಕೆ ಹೊಂದಿರಬೇಕು. ತಮ್ಮನ್ನು ವಿಶೇಷವಾಗಿ ಗುರುತಿಸಿ ಕೊಳ್ಳಲು ಪೂರಕ ಶಕ್ತಿಯನ್ನು ಹೊರ ಹಾಕಬೇಕಿದೆ. ಆಗ, ನಿಮ್ಮ ಮೇಲೆ ಇಟ್ಟಿರುವ ನಂಬಿಕೆ, ಜವಾಬ್ದಾರಿಯ ಹೊಣೆಗಾರಿಕೆಗೆ ಮಹತ್ವ ದೊರೆಯು ತ್ತದೆ. ಭೂತಕಾಲ ಕ್ಕಿಂತ ಹೆಚ್ಚಾಗಿ ವರ್ತಮಾನ ಕಾಲಕ್ಕೆ ಒತ್ತು ಕೊಡುವು ದರಿಂದ ನಮ್ಮನ್ನು ನಿಯಂತ್ರಿಸಲು ಸಾಧ್ಯವಿದ್ದು, ಸಾಧಿಸಲು ಅವಕಾಶ ತೆರೆದುಕೊಳ್ಳುತ್ತದೆ ಎಂದರು. ತಮ್ಮನ್ನು ಅಥ್ಲೆಟ್ನಲ್ಲಿ ಗುರುತಿಸಿಕೊಂಡಿರುವ ಅಶ್ವಿನಿ ನಾಚಪ್ಪ ನನ್ನ ಕ್ರೀಡೆಗೆ ಸ್ಪೂರ್ತಿ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ವ್ಯವಸ್ಥೆ ಕಲ್ಪಿಸಲು ವಾತಾವರಣ ಕೂಡ ಮುಖ್ಯ, ಉತ್ತಮ ಮೈದಾನ, ಮೂಲಭೂತ ಸೌಕರ್ಯ ಪಡೆದು ಕೊಂಡಿರುವ ವಿದ್ಯಾರ್ಥಿಗಳು ಹೆಚ್ಚು ಸಾಧಿಸಲು ಅವಕಾಶ ದೊರೆಯು ತ್ತಿದೆ. ಶಾಲೆಯ ವಾತಾವರಣ ವಿದ್ಯಾರ್ಥಿ ಗಳಲ್ಲಿ ಚಟುವಟಿಕೆ, ಚುರುಕುತನ, ಪ್ರತಿಭೆ ಅನಾವರಣಕ್ಕೆ ಸಾಕ್ಷಿಯಾಗು ತ್ತಿದೆ ಎಂದರು. ವಿದ್ಯಾರ್ಥಿ ನಾಯಕರು ಗಳು ವಿಶೇಷವಾಗಿ ಪಾಲ್ಗೊಂಡರು. ನಂದಿನಿ ಪ್ರಸಾದ್, ಪ್ರಾಂಶುಪಾಲ ಬಾಚೇಟ್ಟಿರ ಗೌರಮ್ಮ ನಂಜಪ್ಪ, ಶಾಲಾ ಮುಖ್ಯಸ್ಥ ದತ್ತ ಕರುಂಬಯ್ಯ, ಎಎಸ್ಎಫ್ ಮ್ಯಾನೇಜಿಂಗ್ ಟ್ರಸ್ಟಿ ಅಶ್ವಿನಿ ನಾಚಪ್ಪ ಇದ್ದರು.