ನಾಪೋಕ್ಲು, ಜು. ೧೦: ಇಲ್ಲಿಗೆ ಸಮೀಪದ ಪಡಿಯಾಣಿ ಗ್ರಾಮದ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್.ವೈ.ಎಸ್.ಎಸ್.ಎಸ್.ಎಫ್. ಶಾಖೆಯ ಅಧೀನದಲ್ಲಿ ನೂತನ ವಾಗಿ ನಿರ್ಮಿಸುತ್ತಿರುವ ನೂರುಲ್ ಉಲಮಾ ಸುನ್ನಿ ಸೆಂಟರ್ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವನ್ನು ಕುರ್ರತು ಸಾದಾತ್ ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ನೆರವೇರಿಸಿದ ಬಳಿಕ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು. ಕೊಡಗು ಜಿಲ್ಲಾ ನಾಹಿಬ್ ಖಾಝಿ ಶಾದುಲಿ ಫೈಝಿ ಎಸ್.ವೈ.ಎಸ್. ಕರ್ನಾಟಕ ರಾಜ್ಯ ಘಟಕದ ಸದಸ್ಯರಾದ ಸಯ್ಯದ್ ಇಲ್ಯಾಸ್ ಅಲ್ ಹೈದರೂಸಿ ತಂಙಳ್ ಎಮ್ಮೆಮಾಡು, ಅಝೀಝ್ ತಂಙಳ್, ಷರಫುದ್ದಿನ್ ತಂಙಳ್, ಇಶಾಕ್ ತಂಙಳ್, ಹಬೀಬ್ ತಂಙಳ್, ಎಸ್.ವೈ.ಎಸ್. ಜಿಲ್ಲಾಧ್ಯಕ್ಷ ಹಮೀದ್ ಮುಸ್ಲಿಯಾರ್, ಎಸ್.ವೈ.ಎಸ್. ಮಡಿಕೇರಿ ವಿಭಾಗ ಅಧ್ಯಕ್ಷÀ ಮುನೀರ್ ಮಲ್‌ಹರಿ, ಪಡಿಯಾಣಿ ಎಸ್.ವೈ.ಎಸ್. ಅಧ್ಯಕ್ಷ ಬಿ.ಎ. ಮೊಯಿದ್ದೀನ್, ಮುಸ್ಲಿಂ ಜಮಾಅತ್ ಅಧ್ಯಕ್ಷ ಅಬ್ಬಾಸ್ ಸಖಾಫಿ, ಪಡಿಯಾಣಿ ಜಮಾಅತ್ ಅಧ್ಯಕ್ಷ ಇಬ್ರಾಹಿಂ ಮುಸ್ಲಿಯಾರ್, ಖತೀಬರಾದ ಅಬ್ದುಲ್ ಗಫೂರ್ ಸಖಾಫಿ, ಗ್ರಾ.ಪಂ.ಸದಸ್ಯರಾದ ಯೂಸುಫ್, ಇಸ್ಮಾಯಿಲ್, ಗಫೂರ್ ಇನ್ನಿತರರು ಇದ್ದರು.