ಚೆಯ್ಯಂಡಾಣೆ, ಜು. ೯: ಗುಂಡಿಗೇರಿಯ ಚಿನೋತ್ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಪ್ರಮುಖರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಚಿನೋತ್ ಕುಟುಂಬದ ಮುಖ್ಯಸ್ಥ ಉಮ್ಮರ್ ಹಾಜಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕುಟುಂಬದ ಮುಖ್ಯಸ್ಥ ಹಾಗೂ ಊರಿನ ಮುತವಲ್ಲಿ ಉಮ್ಮರ್ ಹಾಜಿ, ಬೇಟೋಳಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ, ಕಾಂಗ್ರೆಸ್ ಡಿಸಿಸಿ ಸಮಿತಿಯ ಸದಸ್ಯರಾಗಿ ಆಯ್ಕೆಯಾದ ಮೊಯ್ದು ಹಾಗೂ ಕೊಡಗು ಜಿಲ್ಲಾ ಎಸ್‌ವೈಎಸ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಸಿ.ಪಿ. ಅಹ್ಮದ್ ಮದನಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಸಿ.ಪಿ. ಅಹ್ಮದ್ ಹಾಜಿ, ಸಿ.ಎ. ಅಬ್ದುಲ್ಲ, ಉಮ್ಮರ್ ಪೊಲೀಸ್, ಶಾದುಲಿ ಪೊಲೀಸ್, ಮೊಯ್ದು ಆರ್ಮಿ, ಉಮ್ಮರ್, ರಫೀಕ್, ಶಿಯಾಬ್, ಮುಹಮ್ಮದ್, ಅಬ್ಬಾಸ್, ಹುಸೈನಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಿ.ಪಿ. ಆಲಿ ಸ್ವಾಗತಿಸಿದರೆ, ಸಿ.ಯು. ಮುಹಮ್ಮದ್ ಹಾಜಿ ವಂದಿಸಿದರು.