ಮಡಿಕೇರಿ, ಜು. ೯: ಮಡಿಕೇರಿ ರೋಟರಿ ಸಂಸ್ಥೆಯ ೭೩ನೇ ಅಧ್ಯಕ್ಷೆಯಾಗಿ ಗೀತಾ ಗಿರೀಶ್ ಅಧಿಕಾರ ಸ್ವೀಕರಿಸಿದ್ದಾರೆ.

ನಗರದ ರೋಟರಿ ಸಭಾಂ ಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿದ್ದು, ಕಾರ್ಯ ದರ್ಶಿಯಾಗಿ ಎಂ.ಕೆ. ಶರತ್ ಕರ್ತವ್ಯ ನಿರ್ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ವೀರಾಜಪೇಟೆ ಸ್ಥಾಪನಾ ಅಧಿಕಾರಿ ರೋಟೇರಿಯನ್ ಡಾ. ಎಸ್.ವಿ. ನರಸಿಂಹನ್, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾ. ನಯನಾ ಕಶ್ಯಪ್, ರೋಟರಿ ಸಹಾಯಕ ಗವರ್ನರ್ ಡಿ.ಎಮ್. ತಿಲಕ್, ರೋಟರಿ ಝೋನಲ್ ಲೆಫ್ಟಿನೆಂಟ್ ಎಸ್.ಎಸ್. ಸಂಪತ್ ಕುಮಾರ್ ಪಾಲ್ಗೊಂ ಡಿದ್ದರು. ವನಮಹೋತ್ಸವದ ಪ್ರಯುಕ್ತ ಕಾರ್ಯಕ್ರಮಕ್ಕೆ ಆಗಮಿಸಿದ ಹಿರಿಯ ರಿಗೆ ಗಿಡಗಳನ್ನು ವಿತರಿಸ ಲಾಯಿತು. ಇದೇ ಸಂದರ್ಭ ರೋಟರಿ ಬು¯ ೆಟಿನ್ ಬಿಡುಗಡೆ ಮಾಡಲಾಯಿತು.