ಮಡಿಕೇರಿ, ಜು. ೯: ತಮ್ಮ ಸಂಬAಧಿಕರ ಮದುವೆಗೆ ತೆರಳಿ ಹಿಂತಿರುಗುವ ವೇಳೆ ಕೆಎಸ್‌ಆರ್‌ಟಿಸಿ ಬಸ್ ನಲ್ಲಿ ತಾನು ಧರಿಸಿದ್ದ ಚಿನ್ನದ ಬಳೆಯನ್ನ ಕಳೆದುಕೊಂಡಿದ್ದ ಮಹಿಳೆಗೆ ಬಳೆಯನ್ನು ಹಿಂತಿರುಗಿಸುವ
ಮೂಲಕ ಮಡಿಕೇರಿ ವಿಭಾಗದ ಸಂಚಾರ ನಿಯಂತ್ರಕ ಅಚ್ಚುತ ಭಟ್ ಪ್ರಾಮಾಣಿಕತೆ ಮೆರೆದಿದ್ದಾರೆ.
ನಿನ್ನೆ ಮಂಗಳೂರಿನಿAದ ಬೆಂಗಳೂರಿನ ಕಡೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಕುಶಾಲನಗರ ಮೂಲದ ದಂಪತಿ ಸಂಬAಧಿಕರ ಮದುವೆ ಕಾರ್ಯಕ್ರಮ ಮುಗಿಸಿ ಕುಶಾಲನಗರಕ್ಕೆ ತೆರಳುತ್ತಿದ್ದ ಸಂದರ್ಭ ಬಸ್‌ನಲ್ಲಿ ಲಕ್ಷಾಂತರ ಮೌಲ್ಯದ ಬಂಗಾರದ ಬಳೆಯನ್ನು ಕಳೆದುಕೊಂಡಿದ್ದರು. ಮನೆಗೆ ಹೋದ ಬಳಿಕ ಕೈಯನ್ನು ನೋಡಿದಾಗ ಬಳೆ ಇಲ್ಲದಿರುವ ಬಗ್ಗೆ ಗಮನಿಸಿದ ದಂಪತಿ ಬಸ್ ಟಿಕೆಟ್ ಆಧರಿಸಿ ಮಡಿಕೇರಿ ಡಿಪೋಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಮಡಿಕೇರಿ ವಿಭಾಗದ ಸಂಚಾರ ನಿಯಂತ್ರಕ ಬಸ್ಸು ಚಾಲಕ ಹಾಗೂ ನಿರ್ವಾಹಕ ಇಬ್ಬರನ್ನು ವಿಚಾರಿಸಿ ಬಸ್‌ನಲ್ಲಿ ಬಳೆ ಸಿಕ್ಕ ವಿಚಾರವನ್ನು ಕೂಡಲೇ ವಾರಿಸುದಾರರಿಗೆ ತಿಳಿಸಿದ್ದು ಇಂದು ಅದನ್ನು ಸಂಬAಧಪಟ್ಟ ಮಹಿಳೆಗೆ ಹಸ್ತಾಂತರಿಸುವ ಮೂಲಕ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಪ್ರಾಮಾಣಿಕತೆ ಮೆರೆಯುವವರು ಇಂದು ಕಡಿಮೆಯಾಗಿದ್ದಾರೆ ಎಂಬ ಮಾತುಗಳ ನಡುವೆ ಸಂಚಾರ ನಿಯಂತ್ರಕ ಅಚ್ಚುತ ಭಟ್ ರವರ ಪ್ರಾಮಾಣಿಕತೆಗೆ ದಂಪತಿ ಶ್ಲಾಘನೆ ವ್ಯಕ್ತಪಡಿಸಿದರು.