ಪೊನ್ನಂಪೇಟೆ, ಜು. ೮: ಕಳೆದ ಮೂರು ದಿನಗಳಿಂದ ದಕ್ಷಿಣ ಕೊಡಗಿನಲ್ಲಿ ಮಳೆಯಾಗುತ್ತಿದ್ದು, ಗುರುವಾರ ರಾತ್ರಿ ಸುರಿದ ಮಳೆಗೆ ಕಾನೂರು ಗ್ರಾಮದ ಮನೆಯೊಂದರ ಮುಂಭಾಗದ ತಡೆಗೋಡೆ ಕುಸಿದು ನಷ್ಟ ಸಂಭವಿಸಿದೆ.
ಪೊನ್ನಂಪೇಟೆ ತಾಲೂಕಿನ ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನೂರು ಗ್ರಾಮದ ಮಲ್ಚೀರ ಮಂಜುನಾಥ್ ಎಂಬವರ ಮನೆಯ ಮುಂಭಾಗದಲ್ಲಿದ್ದ ತಡೆಗೋಡೆ ಕುಸಿದು ಬಿದ್ದಿದು ತಡೆಗೋಡೆ ಬಿದ್ದ ರಭಸಕ್ಕೆ ಮನೆಯ ಮುಂಭಾಗದಲ್ಲಿದ್ದ ಶೌಚಾಲಯ ಪೂರ್ತಿಯಾಗಿ ನೆಲ ಸಮವಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಸ್ಥಳಕ್ಕೆ ಗ್ರಾಮ ಪಂಚಾಯಿತಿ ಕಂದಾಯಾಧಿಕಾರಿ ಸುದೀಂದ್ರ, ಗ್ರಾಮ ಲೆಕ್ಕಿಗರಾದ ಪ್ರಿಯಾಂಕ, ಬಿಲ್ ಕಲೆಕ್ಟರ್ ದೊರೆ, ಗ್ರಾಮ ಸಹಾಯಕ ಜತೀನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.