ನಾಪೋಕ್ಲು, ಜು. ೮: ಸಮೀಪದ ಚೆಯ್ಯಂಡಾಣೆ ನರಿಯಂಡಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿ ಕೃಷಿ ಫಸಲು ನಾಶವಾಗುತ್ತಿದೆ ಎಂದು ಆರೋಪಿಸಿ ತಾ.೧೦ ರಂದು (ನಾಳೆ) ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸಂಬAಧಪಟ್ಟವರು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿ ರಸ್ತೆ ತಡೆ ಪ್ರತಿಭಟನೆಗೆ ಮುಂದಾಗಿದ್ದಾರೆ.

ಕೋಕೇರಿ, ಮರಂದೋಡ, ನರಿಯಂದಡ ಹಾಗೂ ಚೇಲಾವರ ಗ್ರಾಮಸ್ಥರು ಸೋಮವಾರ ವೀರಾಜಪೇಟೆ - ನಾಪೋಕ್ಲು ಮುಖ್ಯರಸ್ತೆಯ ಚೆಯ್ಯಂಡಾಣೆಯ ರಸ್ತೆಯಲ್ಲಿ ಬೆಳಿಗ್ಗೆ ೧೦ ಗಂಟೆಯಿAದ ೧೨ ಗಂಟೆವರೆಗೆ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಲಿದ್ದಾರೆ.