ಮಡಿಕೇರಿ, ಜು. ೭: ವಿಶೇಷ ಕೊಡವ ಸಂಸ್ಕೃತಿ - ಸಂಪ್ರದಾಯ, ಆಚಾರ-ವಿಚಾರ ಪದ್ಧತಿಗಳನ್ನು ಮೈಗೂಡಿಸಿಕೊಂಡು ಉಳಿಸಿ ಬೆಳೆಸುತ್ತಾ ಮುನ್ನಡೆಯುತ್ತಿರುವ ಕೊಡವ ಭಾಷಿಕ ೧೮ ಸಮುದಾಯ ಜನಾಂಗದವರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಭರವಸೆ ನೀಡಿದರು.
ವೀರಾಜಪೇಟೆಯ ತಮ್ಮ ನಿವಾಸ ದಲ್ಲಿ ಕೊಡವ ಭಾಷಿಕ ಸಮುದಾಯ ಗಳ ಕೂಟದ ವತಿಯಿಂದ ಶಾಸಕ ಪೊನ್ನಣ್ಣ ಸನ್ಮಾನ ಸ್ವೀಕರಿಸಿ ಮಾತನಾಡಿ, ತಮ್ಮ ವಿಶಿಷ್ಟ ಸಂಸ್ಕೃತಿ ಜತೆಗೆ ಭಾಷೆಯ ಬೆಳವಣಿಗೆಗೆ ಪೂರಕ ವಾಗಿ ಸಾಕಾರಿಗಳಾದ ಭಾಷಿಕ ಜನಾಂಗದವರ ಬಗ್ಗೆ ಅರಿತಿದ್ದೇನೆ. ಜನಾಂಗದ ಬೇಡಿಕೆಗಳನ್ನು ಹಂತ ಹಂತವಾಗಿ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದರು.
ಈ ಸಂದರ್ಭ ಕೊಡವ ಭಾಷಿಕ ಸಮುದಾಯಗಳ ಕೂಟದ ಬೇಡಿಕೆಯಾದ ಕೊಡವ ಅಕಾಡೆಮಿ ಸದಸ್ಯತನ, ಮುಜರಾಯಿ ದೇವಸ್ಥಾನ ಸಮಿತಿಯಲ್ಲಿ ಜನಾಂಗಕ್ಕೆ ಮನ್ನಣೆ, ಭಾಷಿಕ ಸಮುದಾಯಗಳ ಅಭಿವೃದ್ಧಿ ನಿಗಮ, ಎಲ್ಲಾ ಮೂಲ ಸೌಕರ್ಯ ಗಳನ್ನು ಒಳಗೊಂಡಿರುವ ಸುಸಜ್ಜಿತ ಕಲ್ಯಾಣ ಭವನ, ಜಾನಪದ ಸಂಸ್ಕೃತಿಯ ವಸ್ತು ಸಂಗ್ರಹಾಲಯ, ಗ್ರಂಥ ಭಂಡಾರ, ಕೊಡವ ಸಂಸ್ಕೃತಿ, ಕಲೆ ಪ್ರದರ್ಶನ, ಸುಸಜ್ಜಿತ ಆಟದ ಮೈದಾನ ನಿರ್ಮಾಣಕ್ಕೆ ಅಗತ್ಯವಿರುವ ಜಾಗಕ್ಕಾಗಿ ಕೂಟದ ಅಧ್ಯಕ್ಷ ಡಾ. ಮೇಚಿರ ಸುಭಾಷ್ ನಾಣಯ್ಯ ಹಾಗೂ ಕಾರ್ಯದರ್ಶಿ ಕೂಡಂಡ ಸಾಬ ಸುಬ್ರಮಣಿ ಅವರ ಮುಂದಾಳತ್ವದಲ್ಲಿ ಶಾಸಕರಿಗೆ ಮನವಿ ಮಾಡಲಾಯಿತು. ನಂತರ ಶಾಸಕರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭ ಕೂಟದ ಸಹಕಾರ್ಯದರ್ಶಿ ಮೊಳ್ಳೆಕುಟ್ಟಂಡ ದಿನು ಬೋಜಪ್ಪ, ಖಜಾಂಚಿ ಪಡಿಞರಂಡ ಪ್ರಭುಕುಮಾರ್, ಸದಸ್ಯರುಗಳಾದ ಪೊಟ್ಟಂಡ ಎಂ. ಗಣೇಶ್, ಕುಡಿಯರ ಮುತ್ತಪ್ಪ, ವೇದಪ್ಪಂಡ ಬಿ. ಕಿರಣ್, ಬಿದ್ದಪ್ಪ, ಬೀಕಚಂಡ ಬೆಳ್ಯಪ್ಪ, ಮಲೆಯಡ ರಾಜಾ ಮುತ್ತಪ್ಪ, ಕಾಪಾಳ ಕೆ. ಮಿಲನ್, ಪೊನ್ನಜ್ಜೀರ ಕಿಶು ಭರತ್, ಕಣಿಯರ ಜೆ. ಪ್ರಕಾಶ್, ಕೋಲೆಯಂಡ ಯು. ಗಿರೀಶ್, ಜೋಕಿರ ಜೀವನ್, ಮೇಕಂಡ ಪಾಪು ಲೋಕೇಶ್, ಪೊನ್ನೀರ ಗಗನ್, ಅರೆಯಂಡ ರಘು ಭೀಮಯ್ಯ, ತಾಪನೆರ ಮಹೇಶ್, ಮುಡುವಂಡ ರೇಗನ್, ಪ್ರವೀಣ್, ಮೇದರ ಚಂದ್ರ, ಗಿರೀಶ್, ಕೆ. ಕಿರಣ್ ಉಪಸ್ಥಿತರಿದ್ದರು.