ಮಡಿಕೇರಿ, ಜು. ೮ : ಜಿಲ್ಲೆಯಲ್ಲಿ ಮಳೆಯ ವಾತಾವರಣ ಮುಂದುವರಿ ಯುತ್ತಿದೆ. ಆದರೆ ಕಳೆದೆರಡು ದಿನಗಳ ಹಿಂದೆ ಕಂಡುಬAದಿದ್ದ ಅಬ್ಬರ ಕಡಿಮೆ ಯಾಗಿದೆ. ನಡು ನಡುವೆ ವಿರಾಮ ಕಂಡು ಬರುತ್ತಿದೆ. ಆದರೂ ಆಗಾಗ್ಗೆ ಒಂದಷ್ಟು ರಭಸದ ಮಳೆಯಾಗುತ್ತಿದ್ದು ಮುಂಗಾರಿನ ಪರಿಸ್ಥಿತಿ ಯಥಾ ಪ್ರಕಾರ ಮುಂದುವರಿ ಯುತ್ತಿದೆ. ಭಾರೀ ಮಳೆಯಿಂದಾಗಿ ಹಾನಿಗೀಡಾಗಿರುವ ವಿದ್ಯುತ್ ಕಂಬಗಳನ್ನು ಸೆಸ್ಕ್ನಿಂದ ಸರಿಪಡಿಸಲಾಗುತ್ತಿದೆ. ಕುಶಾಲನಗರ, ಸೋಮವಾರಪೇಟೆ ವ್ಯಾಪ್ತಿಯಲ್ಲಿ ಹೆಚ್ಚಿನ ಸಮಸ್ಯೆಯಾಗಿಲ್ಲ. ಆದರೆ ಭಾಗಮಂಡಲ, ಮಡಿಕೇರಿ, ಮೂರ್ನಾಡು, ನಾಪೋಕ್ಲು, ಗೋಣಿಕೊಪ್ಪ, ಶ್ರೀಮಂಗಲ ಕಡೆಗಳಲ್ಲಿ ಸಮಸ್ಯೆಯಾಗಿದ್ದು ಇದನ್ನು ಸರಿಪಡಿಸಲಾಗುತ್ತಿದೆ.
ಹಾನಿಗೀಡಾಗಿರುವ ೧೧೨ ಕಂಬಗಳ ಪೈಕಿ ಇದೀಗ ೪೦ ಕಂಬಗಳನ್ನು ಸರಿಪಡಿಸಲಾಗಿದೆ ಎಂದು ಸೆಸ್ಕ್ನ ಇ.ಇ. ಅನಿತಾಬಾಯಿ ತಿಳಿಸಿದ್ದಾರೆ. ಜಿಲ್ಲೆಯಾದ್ಯಂತ ಮಳೆಯ ಸನ್ನಿವೇಶ ಇದೆಯಾದರೂ ಹೆಚ್ಚಿನ ಅನಾಹುತಗಳು ಈ ತನಕ ಸಂಭವಿಸಿಲ್ಲ. ಎರಡು ದಿನಗಳ ಹಿಂದೆ ಏರಿಕೆಯಾಗಿದ್ದ ನೀತಿನ ಮಟ್ಟದಲ್ಲಿ ತುಸು ಇಳಿಕೆಯಾಗಿದೆಯಾದರೂ ಗ್ರಾಮೀಣ ಪ್ರದೇಶಗಳಲ್ಲಿ ಮಳೆ ಹೆಚ್ಚಿರುವುದರಿಂದ ನದಿ - ತೋಡುಗಳು ತುಂಬಿ ಹರಿಯುತ್ತಿದೆ.