ಮಡಿಕೇರಿ, ಜು. ೮: ವರುಣನ ಆರ್ಭಟ ಜಿಲ್ಲೆಯಲ್ಲಿ ಕಡಿಮೆಯಾಗಿದ್ದು, ಕೆಲವೆಡೆ ಮರ ಧರಾಶಾಯಿ, ರಸ್ತೆ ಹಾನಿ, ತಡೆಗೋಡೆ ಕುಸಿತದಂತಹ ಘಟನೆಗಳು ವರದಿಯಾಗಿವೆ. ಶನಿವಾರ ಮಳೆಯ ಪ್ರಮಾಣ ಕಡಿಮೆ ಇತ್ತು. ತುಂಬಿ ಹರಿಯುತ್ತಿದ್ದ ನದಿ, ತೊರೆಗಳಲ್ಲಿ ನೀರಿನ ಹರಿಯುವಿಕೆ ಇಳಿಮುಖಗೊಂಡಿದೆ. ಜೊತೆಗೆ ಕೃಷಿ ಚಟುವಟಿಕೆಗಳು ಬಿರುಸು ಪಡೆದುಕೊಂಡಿದೆ. ಚೆಯ್ಯಂಡಾಣೆ, ಜು. ೮: ಚೆಯ್ಯಂಡಾಣೆಯಿAದ ಚೇಲಾವರ ಜಲಪಾತಕ್ಕೆ ತೆರಳುವ ರಸ್ತೆಯಲ್ಲಿ ನಿನ್ನೆ ಸುರಿದ ಮಳೆಗೆ ಬೃಹತ್ ಗಾತ್ರದ ಮರ ರಸ್ತೆಗೆ ಉರುಳಿ ಬಿದ್ದ ಪರಿ ಣಾಮ ಪ್ರವಾಸಿಗರಿಗೆ ಹಾಗೂ ಗ್ರಾಮಸ್ಥರಿಗೆ ಸಂಚರಿಸಲು ತೊಡಕಾ ಯಿತು. ವಿದ್ಯುತ್ ತಂತಿ ತುಂಡಾಗಿ ವಿದ್ಯುತ್ ಅಡಚಣೆ ಸಹ ಉದ್ಭವವಾಯಿತು. ಕ್ಷಣಾರ್ಧದಲ್ಲಿ ಗ್ರಾಮಸ್ಥರು ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಈ ಭಾಗದಲ್ಲಿ ಲೈನ್‌ಮೆನ್ ಇದ್ದು ಇಲ್ಲದಂತಾಗಿದೆ. ನಿನ್ನೆಯಿಂದ ಈ ಭಾಗದಲ್ಲಿ ವಿದ್ಯುತ್ ಸರಬರಾಜು ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಮುಂಡಿಯೋಳAಡ ಈರಪ್ಪ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.