ಚೆಯ್ಯಂಡಾಣೆ, ಜು. ೮: ಕರ್ನಾಟಕ ಮುಸ್ಲಿಂ ಜಮಾಅತ್ ಎಸ್‌ವೈ ಎಸ್‌ಎಸ್‌ಎಸ್‌ಎಫ್ ಪಡಿಯಾನಿ ಶಾಖೆಯ ಅಧೀನದಲ್ಲಿ ನಿರ್ಮಿಸುತ್ತಿರುವ ನೂರುಲ್ ಉಲಮಾ ಸುನ್ನೀ ಸೆಂಟರ್ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವನ್ನು ಕೂರತು ಸ್ವಾದಾತ್ ಸಯ್ಯದ್ ಫಝಲ್ ಕೋಯಮ್ಮ ತಂಗಳ್ ಕೂರ ಅವರು ನೆರವೇರಿಸಿ ನಾಡಿನ ಐಕ್ಯತೆ ಹಾಗೂ ಸುಭಿಕ್ಷೆಗಾಗಿ ಸಾಮೂಹಿಕ ಪ್ರಾರ್ಥನೆಗೆ ನೇತೃತ್ವ ನೀಡಿದರು.

ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ನಾಇಬ್ ಖಾಝಿ ಶಾದುಲಿ ಫೈಝಿ, ಎಸ್‌ವೈಎಸ್ ಕರ್ನಾಟಕ ರಾಜ್ಯ ಘಟಕದ ಸದಸ್ಯರಾದ ಸಯ್ಯದ್ ಇಲ್ಯಾಸ್ ಅಲ್ ಹೈದರೂಸಿ ತಂಗಳ್, ಅಜೀಜ್ ತಂಗಳ್, ಷರಫುದ್ದಿನ್ ತಂಗಳ್, ಇಶಾಕ್ ತಂಗಳ್, ಹಬೀಬ್ ತಂಗಳ್, ಎಸ್‌ವೈಎಸ್ ಜಿಲ್ಲಾಧ್ಯಕ್ಷ ಹಮೀದ್ ಮುಸ್ಲಿಯಾರ್, ಎಸ್‌ವೈಎಸ್ ಮಡಿಕೇರಿ ಜೋನ್ ಅಧ್ಯಕ್ಷರಾದ ಮುನೀರ್ ಮಲ್ಹರಿ, ಪಡಿಯಾನಿ ಎಸ್‌ವೈಎಸ್ ಅಧ್ಯಕ್ಷ ಬಿ.ಎ. ಮೊಯಿದ್ದಿನ್, ಮುಸ್ಲಿಂ ಜಮಾಅತ್ ಅಧ್ಯಕ್ಷ ಅಬ್ಬಾಸ್ ಸಖಾಫಿ, ಪಡಿಯಾನಿ ಜಮಾಅತ್ ಅಧ್ಯಕ್ಷ ಇಬ್ರಾಹಿಂ ಮುಸ್ಲಿಯಾರ್, ಖತೀಬ್ ಅಬ್ದುಲ್ ಗಫೂರ್ ಸಖಾಫಿ, ಗ್ರಾಮ ಪಂಚಾಯಿತಿ ಸದಸ್ಯರಾದ ಯೂಸುಫ್, ಇಸ್ಮಾಯಿಲ್, ಗಫೂರ್ ಹಾಗೂ ಮತಿತ್ತರರು ಉಪಸ್ಥಿತರಿದ್ದರು.