ಸಿದ್ದಾಪುರ, ಜು. ೮: ಭಾರಿ ಮಳೆಗೆ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ವೀರಾಜಪೇಟೆ ತಾಲೂಕು ತಹಶೀ ಲ್ದಾರ್ ರಾಮಚಂದ್ರ, ಕಂದಾಯ ಪರಿವೀಕ್ಷಕ ಅನಿಲ್ಕುಮಾರ್ ಅಮ್ಮತ್ತಿ ಹೋಬಳಿಯ ಪ್ರವಾಹ ಪೀಡಿತ ಪ್ರದೇಶ ಗಳಾದ ಕೊಂಡAಗೇರಿ, ಗುಹ್ಯ ಗ್ರಾಮ ಗಳಿಗೆ ತೆರಳಿ ಪರಿಶೀಲಿಸಿದ್ದು, ನದಿ ಯಲ್ಲಿ ನೀರಿನ ಪ್ರಮಾಣ ಏರಿಕೆಯಾ ಗಿದ್ದು ಮುಂಜಾಗ್ರತೆ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದರು.