ಮಡಿಕೇರಿ, ಜು. ೬: ಕನ್ನಡದ ಸಿನಿಮಾವೊಂದು ಗಿನ್ನಿಸ್ ದಾಖಲೆ ಮಾಡಲು ಹೊರಟಿದೆ. ‘ದೇವರ ಆಟ ಬಲ್ಲವರಾರು’ ಎಂಬ ಸಿನಿಮಾದ ಮೂಲಕ ನಿರ್ದೇಶಕ ಜನಾರ್ಧನ್ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಈ ಕುರಿತು ಮಡಿಕೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಚಿತ್ರತಂಡ ಮಾಹಿತಿ ನೀಡಿದೆ.
೩೦ ದಿನಗಳಲ್ಲಿ ಎಲ್ಲಾ ಪ್ರಕ್ರಿಯೆ ಮುಗಿಸಿ ಸಿನಿಮಾ ಬಿಡುಗಡೆ ಮಾಡುವ ಮೂಲಕ ಗಿನ್ನಿಸ್ ದಾಖಲೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ಪೂರ್ತಿ ಚಿತ್ರೀಕರಣ ಮಡಿಕೇರಿ ಸುತ್ತಮುತ್ತ ನಡೆಯಲಿದ್ದು, ಶೂಟಿಂಗ್ ಈಗಾಗಲೇ ಆರಂಭವಾಗಲಿದೆ. ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದೆ ಎಂದು ಚಿತ್ರದ ನಿರ್ದೇಶಕ ಜನಾರ್ಧನ್ ತಿಳಿಸಿದರು. ಚಿತ್ರದ ನಾಯಕ ಅರ್ಜುನ್ ರಮೇಶ್ ಮಾತನಾಡಿ, ೩೬ ಗಂಟೆಗಳ ಟೈಮ್ಲೈನ್ ಇಟ್ಟುಕೊಂಡು ಸಿನಿಮಾ ಸೆಟ್ವರ್ಕ್ ಆರಂಭವಿಸಿದ ಚಿತ್ರ ತಂಡ, ಕೇವಲ ೨೨ ಗಂಟೆಗಳಲ್ಲಿ ನಿಗದಿತ ಸಮಯಕ್ಕಿಂತ ಮೊದಲೇ ಮುಗಿಸಿ ಗಿನ್ನಿಸ್ ಮೊದಲ ಹಂತ ಪೂರ್ಣಗೊಳಿಸಿದೆ ಎಂದು ಹೇಳಿದರು.
೨೦೦ ಮಂದಿಯನ್ನೊಳಗೊAಡ ತಂಡವು ಸುಂಟಿಕೊಪ್ಪ ಬಳಿಯ ವಿಶಾಲವಾದ ಜಾಗದಲ್ಲಿ ಹಗಲು ರಾತ್ರಿ ಶ್ರಮವಹಿಸಿ ೧೫೦ ಅಡಿ ಉದ್ದ, ೮೦ ಅಡಿ ಅಗಲ, ೧೯ ಅಡಿ ಎತ್ತರ ವಿಸ್ತೀರ್ಣದ ಬೃಹತ್ ಸೆಟ್ ನಿರ್ಮಾಣ ಮಾಡಿದೆ. ೩೦ ದಿನಗಳಲ್ಲಿ ಸಿನಿಮಾದ ಚಿತ್ರೀಕರಣ ಪೂರ್ಣಗೊಳ್ಳಲಿದ್ದು, ಕನ್ನಡ ಚಿತ್ರರಂಗದಲ್ಲೇ ಇದು ಮೊದಲ ಪ್ರಯತ್ನ ಎಂದರು.
ಸುದ್ದಿಗೋಷ್ಠಿಯಲ್ಲಿ ಚಿತ್ರದ ನಿರ್ಮಾಪಕ ಹನುಮಂತರಾಜ್, ಕಲಾ ನಿರ್ದೇಶಕ ಬಾಲಚಂದ್ರ, ಸ್ಟಂಟ್ ಮಾಸ್ಪರ್ ಕುಂಫುಚAದ್, ಡಿಒಪಿ ಶ್ರೀರಾಮ್ ಹಾಜರಿದ್ದರು.