ಮಡಿಕೇರಿ, ಜು. ೫: ಕೆಲಸಕ್ಕೆಂದು ತೆರಳಿದ ವ್ಯಕ್ತಿ ಇದು ವರೆಗೂ ಮನೆಗೆ ಬಾರದೆ ನಾಪತ್ತೆಯಾಗಿರುವ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

೨೩.೬.೨೦೨೩ರಂದು ಮಣಿಕಂಠ ಎಂಬವರು ಕೆಲಸಕ್ಕೆಂದು ತಮಿಳುನಾಡಿಗೆ ತೆರಳುವುದಾಗಿ ಹೇಳಿ ತೆರಳಿದವರು ಇನ್ನೂ ಸಂಪರ್ಕಕ್ಕೆ ದೊರೆತ್ತಿಲ್ಲ ಎಂದು ಪತ್ನಿ ಮಂಜುಳಾ ದೂರು ನೀಡಿದ್ದಾರೆ. ೩೮ ವರ್ಷ ಪ್ರಾಯದ ಮಣಿಕಂಠ ೫.೭ ಅಡಿ ಎತ್ತರವಿದ್ದು, ಕನ್ನಡ, ತಮಿಳು, ಮಲೆಯಾಳಂ, ಹಿಂದೆ ಭಾಷೆ ಬಲ್ಲವರಾಗಿದ್ದಾರೆ. ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಪತ್ತೆಯಾದಲ್ಲಿ ೦೮೨೭೨-೨೨೮೭೭೭, ೨೨೯೦೦೦ ಸಂಖ್ಯೆಯನ್ನು ಸಂಪರ್ಕಿಸುವAತೆ ಪ್ರಕಟಣೆ ತಿಳಿಸಿದೆ.