ಶನಿವಾರಸಂತೆ, ಜು. ೫: ನಾಡಪ್ರಭು ಕೆಂಪೇಗೌಡರು ಭಾರತ ದೇಶಕ್ಕೇ ನಾಯಕರೆನಿಸಿದ್ದು ಆ ಕಾಲದಲ್ಲೆ ಪ್ರಪಂ ಚವೇ ತಿರುಗಿ ನೋಡುವಂತೆ ಬೆಂಗಳೂ ರನ್ನು ಅದ್ಭುತವಾಗಿ ಕಟ್ಟಿದವರು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಅಭಿಪ್ರಾ ಯಪಟ್ಟರು. ಸಮೀಪದ ಕೊಡ್ಲಿಪೇಟೆ ಒಕ್ಕಲಿಗರ ಯುವ ವೇದಿಕೆ ವತಿಯಿಂದ ಕೆರಗನಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ಆಯೋಜಿಸಿದ್ದ ೫೧೪ ನೇ ಕೆಂಪೇಗೌಡ ಜಯಂತಿ ಕಾರ್ಯಕ್ರ ಮದ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡಿದರು. ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರದ ಶೈಲಿ ಒಕ್ಕಲಿ ಗರಿಗೆ ಮಾತ್ರವಲ್ಲ; ಇತರ ಜನಾಂಗದ ರಾಜರಿಗೂ ಆಕರ್ಷಣೀಯವಾಗಿತ್ತು. ಇಂಜಿನಿಯರ್, ವೈದ್ಯರು ಇಲ್ಲದ ಸಮಯದಲ್ಲಿ ಕುದುರೆಯಲ್ಲಿ ಕುಳಿತು ಓಡಾಡಿ ಪರಿಶ್ರಮದಿಂದ ಬೆಂಗಳೂ ರನ್ನು ನಿರ್ಮಿಸಿದರು. ದುರದೃಷ್ಟಕರ ವೆಂದರೆ ಈಗ ಜನರು ಬೆಂಗಳೂರು ತೊರೆದು ಹಳ್ಳಿಗಳಿಗೆ ವಲಸೆ ಬರು ವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಶಾಸಕನಾಗಿ ಎಲ್ಲಾ ಜನಾಂಗದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಚುನಾವಣಾ ಸಮಯದಲ್ಲಿ ಭರವಸೆ ನೀಡಿದಂತೆ ಈ ಸಮುದಾಯ ಭವ ನಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಲು ಸರ್ಕಾರ ಹಾಗೂ ವೈಯಕ್ತಿಕವಾಗಿ ಅನುದಾನ ನೀಡುತ್ತೇನೆ ಎಂದರು.
ಮುಖ್ಯ ಅತಿಥಿ ಸಂಸದ ಪ್ರತಾಪ ಸಿಂಹ ಮಾತನಾಡಿ, ೫೦೦ ವರ್ಷಗಳ ಐತಿಹಾಸಿಕ ಬೆಂಗಳೂರು ನಗರ ನಿರ್ಮಾಣ ಮಾಡಿದ ಕೆಂಪೇಗೌಡರು ಸರ್ವ ಧರ್ಮಗಳ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸರ್ಕಾರ ಕೆಂಪೇಗೌಡರ ಸಾಧನೆಯ ನೆನಪಿಗಾಗಿ ವಿಮಾನ ನಿಲ್ದಾಣದ ಪಕ್ಕದಲ್ಲಿ ೧೦೮ ಅಡಿಯ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡಿ ಕೃತಜ್ಞತೆ ಸಲ್ಲಿಸಿದೆ. ವಿವಿಧ ರಾಜಕೀಯ ಪಕ್ಷದವರು, ಸಂಘ ಸಂಸ್ಥೆಯವರು ಕೆಂಪೇಗೌಡರ ಜಯಂತಿ ಆಚರಣೆ ಮಾಡಿ ಅವರ ಕೊಡುಗೆಯನ್ನು ವಿಶ್ವಕ್ಕೆ ಸಾರುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಮಾತನಾಡಿ, ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಎಲ್ಲಾ ರಾಜಕೀಯ ಪಕ್ಷದ ಮುಖಂಡರು ಸೇರಿ ಒಗ್ಗಟ್ಟಾಗಿ ಕೆಂಪೇಗೌಡರ ಮಾದರಿಯಲ್ಲೇ ಯೋಜನೆ ರೂಪಿಸಬೇಕು. ಸಂಘದಿAದ ಸೋಮವಾರಪೇಟೆ ಯಲ್ಲಿ ಜಾಗ ಖರೀದಿಸಿದ್ದು ಜನಾಂಗದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಿಸಲಾಗುವುದು ಎಂದರು.
ಕೆಪಿಸಿಸಿ ಕಾರ್ಯದರ್ಶಿ ಕೆ.ಪಿ. ಚಂದ್ರಕಲಾ, ತಾಲೂಕು ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಚಕ್ರವರ್ತಿ, ಮುಖಂಡ ಕೆ.ಕೆ. ರೇಣುಕ ಮಾತನಾಡಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಆರ್. ಚಂದ್ರಶೇಖರ್, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ತೇಜಕುಮಾರ್, ಒಕ್ಕಲಿಗರ ಯುವ ವೇದಿಕೆ ಕೊಡ್ಲಿಪೇಟೆ ಘಟಕದ ಅಧ್ಯಕ್ಷ ನಾಗೇಶ್, ಕಾರ್ಯದರ್ಶಿ ಅವಿನಾಶ್, ಹಾನಗಲ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಿಥುನ್, ಗ್ರಾಮಸ್ಥರು ಹಾಜರಿದ್ದರು.
ಕಾರ್ಯಕ್ರಮಕ್ಕೆ ಮೊದಲು ಹೊಸ ಮುನಿಸಿಪಾಲಿಟಿ ಗಣಪತಿ ದೇವಸ್ಥಾನದ ಮುಂಭಾಗದಿAದ ಬೆಳ್ಳಿ ರಥದಲ್ಲಿ ಕೆಂಪೇಗೌಡರ ಭಾವಚಿತ್ರ ಇರಿಸಿ, ಡೊಳ್ಳು ಕುಣಿತದೊಂದಿಗೆ ಆರಂಭವಾದ ಮೆರವಣಿಗೆಗೆ ಶಾಸಕ ಡಾ. ಮಂಥರ್ ಗೌಡ ಹಾಗೂ ಸಂಸದ ಪ್ರತಾಪ ಸಿಂಹ ಚಾಲನೆ ನೀಡಿದರು.