ಸಿದ್ದಾಪುರ, ಜು. ೫: ಸಿದ್ದಾಪುರ ಹಾಗೂ ನೆಲ್ಲಿಹುದಿಕೇರಿ ವ್ಯಾಪ್ತಿ ಯಲ್ಲಿ ಮಳೆಗೆ ಭಾರೀ ಗಾತ್ರದ ಮರ ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ಮಂಗಳವಾರ ಸಂಜೆಯಿAದ ವಿದ್ಯುತ್ ಕಡಿತಗೊಂಡಿದೆ. ೩೩ ಕೆ ವಿ ವಿದ್ಯುತ್ ತಂತಿಯ ಮೇಲೆ ಮರ ಬಿದ್ದಿದ್ದು ಸೆಸ್ಕ್ ಸಿಬ್ಬಂದಿ ಮರ ತೆರವು ಹಾಗೂ ಕಂಬಗಳ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ.