ಕಡಂಗ, ಜು. ೫: ಕಡಂಗ ಎಸ್.ವೈ.ಎಸ್. ಆಮಿಲ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಸಮಸ್ತದ ೯೭ನೇ ಸ್ಥಾಪಕದ ದಿನದ ಪ್ರಯುಕ್ತ ರಕ್ತದಾನ ಶಿಬಿರ ನಡೆಯಿತು.

ವೀರಾಜಪೇಟೆ ಶಾಫಿ ಜುಮಾಮಸೀದಿ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ರಕ್ತ ನಿಧಿ ಕೇಂದ್ರ ಹಾಗೂ ಎಸ್.ವೈ.ಎಸ್. ಆಮಿಲ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಬೃಹತ್ ರಕ್ತದಾನ ಶಿಬಿರವನ್ನು ವೀರಾಜಪೇಟೆ ಮದರಸ ಸಭಾಂಗಣದಲ್ಲಿ ನಡೆಸಲಾಯಿತು. ಕೊಡಗು ಜಿಲ್ಲಾ ವೈದ್ಯಕೀಯ ವಿಜ್ಞಾನ ಸಂಸ್ಥೆ ಮುಖ್ಯಸ್ಥರಾದ ಡಾ. ಕರುಂಬಯ್ಯ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ರಕ್ತದಾನ ಶಿಬಿರದಲ್ಲಿ ವೀರಾಜಪೇಟೆಯ ಹಾಗೂ ಸುತ್ತಮುತ್ತಲಿನ ಯುವಕರು ರಕ್ತದಾನ ಮಾಡಿದರು.

ರಕ್ತದಾನದ ಮಹತ್ವವನ್ನು ಸಂಕ್ಷಿಪ್ತವಾಗಿ ವೈದ್ಯಾಧಿಕಾರಿ ಡಾ.ಕರುಂಬಯ್ಯ ತಿಳಿಸಿದರು. ದಾನಿಗಳಿಗೆ ಅಭಿನಂದನಾ ಪತ್ರವನ್ನು ನೀಡಲಾಯಿತು. ಶಿಬಿರದ ಮುಖ್ಯ ಅತಿಥಿಗಳಾಗಿ ಎಸ್.ವೈ.ಎಸ್. ಮುಖ್ಯಸ್ಥ ಸಿಪಿಎಂ ಬಶೀರ್ ಹಾಜಿ, ವೀರಾಜಪೇಟೆ ಶಾಫಿ ಜುಮಾ ಮಸೀದಿ ಕಾರ್ಯದರ್ಶಿ ಆಲಿ, ಅಬ್ದುಲ್ ರಹವುಫ್, ಷರೀಫ್ ಮುಂತಾದವರು ಹಾಜರಿದ್ದರು.