ಮಡಿಕೇರಿ, ಜು. ೫: ಭರವಸೆ ಯೊಂದಿಗೆ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಜನಸೇವೆಗೆ ಮುಂದಾಗಬೇಕೆAದು ರೋಟರಿ ಜಿಲ್ಲೆ ೩೧೮೧ರ ನಿಯೋಜಿತ ಗವರ್ನರ್ ವಿಕ್ರಂದತ್ತ ಹೇಳಿದ್ದಾರೆ.

ನಗರದಲ್ಲಿ ರೋಟರಿ ಮಿಸ್ಟಿ ಹಿಲ್ಸ್ನ ನೂತನ ಅಧ್ಯಕ್ಷರಾಗಿ ಪ್ರಮೋದ್ ಕುಮಾರ್ ರೈ, ಕಾರ್ಯದರ್ಶಿ ರತ್ನಾಕರ್ ರೈ ಮತ್ತು ತಂಡಕ್ಕೆ ಪದಗ್ರಹಣ ನೆರವೇರಿಸಿ ಮಾತನಾಡಿದ ೨೦೨೪-೨೫ನೇ ರೋಟರಿ ವರ್ಷದ ಗವರ್ನರ್ ವಿಕ್ರಂದತ್ತ, ರೋಟರಿಯಂಥ ಜಾಗತಿಕ ಸಮಾಜಸೇವಾ ಸಂಸ್ಥೆಯ ಬಗ್ಗೆ ಜನರು ಅಪಾರವಾದ ನಂಬಿಕೆ, ಭರವಸೆಗಳನ್ನು ಇಟ್ಟುಕೊಂಡಿದ್ದಾರೆ. ಈ ನಂಬಿಕೆಗೆ ಚ್ಯುತಿಬಾರದಂತೆ ರೋಟರಿ ಸದಸ್ಯರು ಸಾಕಷ್ಟು ಛಲ, ಭರವಸೆಯೊಂದಿಗೆ ತಮಗಿರುವ ಅವಕಾಶಗಳನ್ನು ಸಮರ್ಥವಾಗಿ ಉಪಯೋಗಿಸಿ ಕೊಂಡು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಸಕ್ರಿಯರಾಗುವಂತೆ ಕರೆ ನೀಡಿದರು.

ಯುವಪೀಳಿಗೆಗೆ ರೋಟರಿಯ ಮಹತ್ವ ಮತ್ತು ಸಮಾಜಸೇವಾ ಕಾರ್ಯಗಳನ್ನು ಪರಿಣಾಮಕಾರಿ ಯಾಗಿ ತಿಳಿಹೇಳುವ ಮೂಲಕ ಯುವಪೀಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ರೋಟರಿ ಸಂಸ್ಥೆಯ ಸದಸ್ಯರಾಗುವಂತೆ ಪ್ರೇರೇಪಿಸಬೇಕು ಎಂದು ಹೇಳಿದ ವಿಕ್ರಂದತ್ತ, ರೋಟರಿ ಮಿಸ್ಟಿ ಹಿಲ್ಸ್ ರೋಟರಿ ಫೌಂಡೇಶನ್‌ಗೆ ೫ ಸಾವಿರ ಡಾಲರ್ ನೀಡುವ ಮೂಲಕ ಮಹತ್ವದ ಕಾರ್ಯಕೈಗೊಂಡಿರುವ ಬಗ್ಗೆ ಶ್ಲಾಘಿಸಿದರು.

ರೋಟರಿಯ ಸಹಾಯಕ ಗವರ್ನರ್ ದೇವಣಿರ ತಿಲಕ್ ಪೊನ್ನಪ್ಪ ಮಾತನಾಡಿ, ರೋಟರಿ ವರ್ಷದಲ್ಲಿ ಅಂಗನವಾಡಿಗಳಿಗೆ ಮೂಲಸೌಲಭ್ಯ ಕಲ್ಪಿಸುವಿಕೆ, ಮಳೆ ನೀರು ಕೊಯ್ಲು, ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ರೋಟರಿಯ ಸದಸ್ಯರೆಲ್ಲರೂ ರೋಟರಿಯ ಮೂಲತತ್ವವಾದ ಭಾವೈಕ್ಯತೆ, ಸೌಹಾರ್ದತೆಯ ಆಧಾರದಲ್ಲಿ ಒಂದಾಗಿ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳ ಬೇಕಾಗಿದೆ ಎಂದರು.

ವಲಯ ಸೇನಾನಿ ಎಸ್.ಎಸ್. ಸಂಪತ್ ಕುಮಾರ್ ಮಿಸ್ಟಿ ಹಿಲ್ಸ್ನ ವಾರ್ತಾ ಸಂಚಿಕೆ ರೋಟೋ ಮಿಸ್ಟ್ನ್ನು ಬಿಡುಗಡೆಗೊಳಿಸಿ ಮಾತನಾಡಿ, ರೋಟರಿ ಸೇವಾ ಸಂಸ್ಥೆಯಲ್ಲಿ ಸದಸ್ಯರಾಗಿ ಸಮಾಜಕ್ಕೆ ಕೊಡುಗೆ ನೀಡುವುದೇ ಮಹತ್ವದ ವಿಚಾರ ಎಂದರು.

ಮಿಸ್ಟಿ ಹಿಲ್ಸ್ನ ನೂತನ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಮಾತನಾಡಿ, ೧೮ ವರ್ಷಗಳನ್ನು ಸಮಾಜಸೇವಾ ಚಟುವಟಿಕೆಗಳಲ್ಲಿ ಕಳೆದಿರುವ ಮಿಸ್ಟಿ ಹಿಲ್ಸ್ನ ಅಧ್ಯಕ್ಷನಾಗಿ ೧೯ನೇ ವರ್ಷದಲ್ಲಿಯೂ ವಿನೂತನ ಕಾರ್ಯ ಯೋಜನೆಗಳನ್ನು ಸಮಾಜಕ್ಕೆ ನೀಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಅಭಿನ್‌ರೈಗೆ ಸನ್ಮಾನ: ಮಿಸ್ಟಿ ಹಿಲ್ಸ್ನ ನೂತನ ಕಾರ್ಯದರ್ಶಿ ರತ್ನಾಕರ್ ರೈ, ನಮಿತಾ ರೈ ದಂಪತಿ ಪುತ್ರ ಅಭಿನ್ ರೈ ಅವರು ರಾಷ್ಟಿçÃಯ ಮೋಟಾರ್ ರ‍್ಯಾಲಿ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಮಿಸ್ಟಿ ಹಿಲ್ಸ್ ವತಿಯಿಂದ ಸನ್ಮಾನಿಸಿ ಗೌರವಿಸ ಲಾಯಿತು. ಇತ್ತೀಚೆಗೆ ಅರುಣಾಚಲ ಪ್ರದೇಶದಲ್ಲಿ ಆಯೋಜಿತ ರಾಷ್ಟಿçÃಯ ಮೋಟಾರ್ ರ‍್ಯಾಲಿಯ ೪ ವಿಭಾಗಗಳಲ್ಲಿ ಅಭಿನ್ ರೈ ಪ್ರಥಮ ಸ್ಥಾನ ಪಡೆದಿದ್ದರು. ಈವರೆಗೆ ಯುವಸಾಧಕ ಅಭಿನ್ ರೈ ಗೆ ಮೋಟಾರ್ ರ‍್ಯಾಲಿ ಸ್ಪರ್ಧೆಗಳಲ್ಲಿ ೨೫ ಪ್ರಥಮ ಸ್ಥಾನ ದೊರಕಿದೆ. ಅಭಿನ್ ರೈ ಸಾಧನೆಯ ಬಗ್ಗೆ ಮಿಸ್ಟಿ ಹಿಲ್ಸ್ ವೋಕೇಷನಲ್ ಸರ್ವೀಸ್ ನಿರ್ದೇಶಕ ಅನಿಲ್ ಎಚ್.ಟಿ. ಪರಿಚಯಿಸಿದರು.

ಮಿಸ್ಟಿ ಹಿಲ್ಸ್ನ ನಿಕಟಪೂರ್ವ ಅಧ್ಯಕ್ಷ ಪ್ರಸಾದ್ ಗೌಡ, ಕಾರ್ಯದರ್ಶಿ ರತ್ನಾಕರ್ ರೈ ವೇದಿಕೆಯಲ್ಲಿದ್ದರು.

ಇದೇ ಸಂದರ್ಭ ರೋಟರಿ ಮಿಸ್ಟಿ ಹಿಲ್ಸ್ನ ವಿಜ್ಞಾನ ವಾಹಿನಿಯ ಈ ವರ್ಷದ ಯೋಜನೆಗೆ ಚಾಲನೆ ನೀಡಲಾಯಿತು. ಅಂತೆಯೇ ಮಡಿಕೇರಿ ನಗರದ ಅಂಗನವಾಡಿಗಳಿಗೆ ವಿವಿಧ ಸೌಲಭ್ಯಗಳನ್ನು ನೀಡಲಾಯಿತು.

ಮಿಸ್ಟಿ ಹಿಲ್ಸ್ ಸ್ಥಾಪಕಾಧ್ಯಕ್ಷ ಬಿ.ಜಿ.ಅನಂತಶಯನ, ಪ್ರಮುಖರಾದ ಅನಿಲ್ ಎಚ್.ಟಿ. ಎ.ಕೆ.ಜೀವನ್, ಕೆ.ಡಿ.ದಯಾನಂದ್, ರಶ್ಮಿದೀಪ, ಪ್ರತಿಭಾ ರೈ, ಪಿ.ವಿ. ಅಶೋಕ್, ಎಂ.ಧನAಜಯ್, ಹರೀಶ್ ಕುಮಾರ್, ಶಂಕರ್ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.