ರೋಟರಿ ಪದಗ್ರಹಣ

ಗೋಣಿಕೊಪ್ಪ ವರದಿ, ಜು. ೬: ಜಲ ಸಂರಕ್ಷಣೆ, ಮಹಿಳಾ ಸಬಲೀಕರಣಕ್ಕೂ ರೋಟರಿ ಯೋಜನೆ ರೂಪಿಸಿಕೊಂಡಿದೆ ಎಂದು ರೋಟರಿ ಸಹಾಯಕ ಗವರ್ನರ್ ತಿಲಕ್ ಪೊನ್ನಪ್ಪ ಹೇಳಿದರು.

ಅತ್ತೂರಿನ ಖಾಸಗಿ ರೆಸಾರ್ಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಗೋಣಿಕೊಪ್ಪ ರೋಟರಿ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ರೋಟರಿ ತನ್ನದೇ ಚಿಂತನೆಯಲ್ಲಿ ವಿಶ್ವಕ್ಕೆ ಕೊಡುಗೆ ನೀಡುತ್ತಾ ಬಂದಿದೆ. ಜಲ ಸಂರಕ್ಷಣೆ, ಮಹಿಳಾ ಸಬಲೀಕರಣ, ಕೌಶಲ್ಯ ಅಭಿವೃದ್ಧಿ, ಅಂಗನವಾಡಿ, ಸ್ಥಳೀಯ ಸಮಸ್ಯೆಗಳತ್ತ ಕೂಡ ಬೆಳಕು ಹರಿಸುವ ಕಾರ್ಯ ಮಾಡುತ್ತಿದೆ. ಈ ನಿಟ್ಟಿನಲ್ಲಿ ಸದಸ್ಯರುಗಳು ಯೋಜನೆ ಅನುಷ್ಠಾನಕ್ಕೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಅಧಿಕಾರ ಹಸ್ತಾಂತರಗೊಳಿಸಿ ಮಾತನಾಡಿದ ಮಾಜಿ ಜಿಲ್ಲಾ ಗವರ್ನರ್ ಎಂ.ಎA. ಸುರೇಶ್ ಚೆಂಗಪ್ಪ, ಸಮುದಾಯ ಅಭಿವೃದ್ಧಿಗೆ ವಿಶ್ವಮಟ್ಟದಲ್ಲಿ ರೋಟರಿ ಯೋಜನೆ ರೂಪಿಸಿಕೊಂಡಿದೆ. ರೋಟರಿ ಅನುದಾನ, ಸದಸ್ಯರ ಹೋರಾಟದ ಫಲವಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದರು.

ಈ ಸಂದರ್ಭ ಅಧ್ಯಕ್ಷರಾಗಿ ಕುಂಞÂಯAಡ ಅರುಣ್ ತಮ್ಮಯ್ಯ, ಕಾರ್ಯದರ್ಶಿಯಾಗಿ ತೀತಮಾಡ ಯು ಮೋಹನ್, ಖಜಾಂಚಿಯಾಗಿ ಎಂ.ಕೆ. ದೀನಾ, ಆಡಳಿತ ಮಂಡಳಿ ಯಲ್ಲಿ ಪಿ.ವಿ. ವಿಜಯ್, ಕೆ.ಎಂ. ಕಾವೇರಪ್ಪ, ಡಾ. ಕೆ.ಎನ್. ಚಂದ್ರಶೇಖರ್, ಕೆ.ಬಿ. ನವೀನ್, ಬಿ.ಎ. ರೀಟಾ ದೇಚಮ್ಮ, ಡಾ. ಆಶಿಕ್ ಚೆಂಗಪ್ಪ, ಟಿ.ಎಂ. ಕಾವೇರಮ್ಮ, ಟಿ.ಬಿ. ಪೂಣಚ್ಚ, ಎ.ಎ. ಚೆಂಗಪ್ಪ, ಕಿಶೋರ್ ಮಾದಪ್ಪ, ಡಾ. ಕೆ.ಪಿ. ಚಿಣ್ಣಪ್ಪ, ಮೀನಾಕ್ಷಿ, ವಾಸು ಉತ್ತಪ್ಪ, ಕೆ.ಜಿ. ರಾಜೀವ್, ಸುಮಿ ಸುಬ್ಬಯ್ಯ, ಲತಾ ಬೋಪಣ್ಣ, ಪ್ರಮೋದ್ ಕಾಮತ್, ಕೆ.ಎಸ್. ವಿವೇಕ್, ಜಮುನಾ ತಿಮ್ಮಯ್ಯ, ಆನ್ಸ್ ಅಧ್ಯಕ್ಷೆಯಾಗಿ ನಿರ್ಮಲಾ ಕಾವೇರಪ್ಪ ಪದಗ್ರಹಣ ಸ್ವೀಕರಿಸಿದರು. ನೂತನವಾಗಿ ಸೇರಿದ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ನಿರ್ಗಮಿತ ಅಧ್ಯಕ್ಷೆ ಜೆ.ಕೆ. ಶುಭಾಷಿಣಿ, ವಲಯ ಲೆಫ್ಟಿನೆಂಟ್ ಮನೆಯಪಂಡ ಕೆ. ಮಾಚಯ್ಯ ಇದ್ದರು.