ಸುಂಟಿಕೊಪ್ಪ, ಜು. ೬: ಯಾವುದೇ ಒಂದು ಗುರಿಯನ್ನು ತಲುಪಬೇಕಾದರೆ ಅಥವಾ ಕನಸನ್ನು ನನಸು ಮಾಡಿಕೊಳ್ಳಬೇಕಾದರೆ ಆರಂಭದಲ್ಲಿ ಉತ್ಸಾಹ ಹೆಚ್ಚಿರಬೇಕು ಎಂದು ಸ್ವಸ್ಥ ವಿಶೇಷ ಶಾಲೆಯ ಸಿ.ಬಿ.ಆರ್. ಸಂಯೋಜಕ ಮುರುಗೇಶ್ ಹೇಳಿದರು.
ಇಲ್ಲಿನ ಸರ್ಕಾರಿ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ "ಆರಂಭಿಕ ಉತ್ಸಾಹ ಮತ್ತು ವ್ಯಕ್ತಿತ್ವ ವಿಕಸನ "ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿಕ್ಷಣಕ್ಕೆ ಪೂರಕವಾದ ಹತ್ತು ಹಲವು ಚಟುವಟಿಕೆಗಳನ್ನು ವಿದ್ಯಾರ್ಥಿಗಳು ತಮ್ಮೊಳಗೆ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಉತ್ಸಾಹ ಭರಿತರಾಗಿ ಕಲಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಗುರಿಮುಟ್ಟಲು ಸಾಧ್ಯ ಎಂದರು.
ಈ ಸಂದರ್ಭ ಹಲವು ಸಾಧಕರ ವಿಚಾರಧಾರೆಗಳನ್ನು ತಿಳಿಸಿಕೊಟ್ಟರಲ್ಲದೇ ಜಾನಪದ ಹಾಡು ಮತ್ತು ಕತೆಗಳ ಮೂಲಕ ಎಲ್ಲರನ್ನು ರಂಜಿಸಿದರು. ಕಾಲೇಜಿನ ಪ್ರಾಚಾರ್ಯ ಪಿ.ಎಸ್. ಜಾನ್ ಮಾತನಾಡಿ, ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಠ ಪ್ರವಚನಗಳ ಬಗ್ಗೆ ಒಲವನ್ನು ಹೊಂದದೆ ಇದ್ದರೆ ಅವರುಗಳ ವಿದ್ಯಾರ್ಥಿ ಜೀವನವು ಫಲದಾಯಕವಾಗಿರುವುದಿಲ್ಲ ಎಂದು ಕಿವಿಮಾತು ಹೇಳಿದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕರುಂಬಯ್ಯ, ಖಜಾಂಚಿ ರಮೇಶ್ ಪಿಳ್ಳೆöÊ, ಉಪನ್ಯಾಸಕರಾದ ಈಶ, ಕೆ.ಸಿ.ಕವಿತಾ, ಸರಳಾ,ಸುನೀತಾ, ಪದ್ಮಾವತಿ, ಕವಿತಾ ಭಕ್ತಾ, ಮಂಜುಳಾ, ಸುಚಿತ್ರಾ, ಅಭಿಷೇಕ್, ಕನಕ ಇತರರು ಇದ್ದರು.