ಕುಶಾಲನಗರ, ಜು. ೪: ಮಾಜಿ ಸಚಿವ ಹಾಗೂ ಮಡಿಕೇರಿ ಕ್ಷೇತ್ರದ ಮಾಜಿ ಶಾಸಕ ಅಪ್ಪಚ್ಚು ರಂಜನ್ ಅವರ ೬೬ ನೇ ವರ್ಷದ ಹುಟ್ಟುಹಬ್ಬ ಆಚರಣೆ ಕುಶಾಲನಗರದಲ್ಲಿ ಸರಳವಾಗಿ ನಡೆಯಿತು. ಅಪ್ಪಚ್ಚು ರಂಜನ್ ಅಭಿಮಾನಿ ಬಳಗದ ವತಿಯಿಂದ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ೩೦ ಕ್ಕೂ ಅಧಿಕ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಅಭಿಮಾನಿ ಬಳಗದ ಪ್ರಮುಖರಾದ ಎಂ.ಎA.ಚರಣ್, ಪುಂಡರೀಕಾಕ್ಷ, ವೈಶಾಖ್, ಪ್ರವೀಣ್, ದರ್ಶನ್, ಆದರ್ಶ್, ಮಂಜುಳಾ, ಆರೋಗ್ಯ ಕೇಂದ್ರದ ವೈದ್ಯ ಡಾ.ಶಿವಕುಮಾರ್ ಮತ್ತಿತರರು ಇದ್ದರು.