ಕೂಡಿಗೆ, ಜು. ೪: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೌತಿ ಖಾತೆ ಆಂದೋಲನ ಕಾರ್ಯಕ್ರಮವು ಕೂಡಿಗೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕುಶಾಲನಗರ ತಾಲೂಕು ತಹಶೀಲ್ದಾರ್ ಟಿ.ಎಂ. ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ತಾ. ೭ ರಂದು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಎಲ್ಲಾ ಗ್ರಾಮಗಳ ಜನತೆಯ ಖಾತೆ ಬದಲಾವಣೆ, ಪಟ್ಟೆದಾರಿಕೆ ಬದಲಾವಣೆ, ಪಹಣಿಯಲ್ಲಿನ ತಿದ್ದುಪಡಿ ನಡೆಯಲಿದೆ. ಅಗತ್ಯ ದಾಖಲಾತಿಗಳಾದ ಮೂಲ ಜಮಾಬಂದಿ, ಪಹಣೆಯ ಆಕಾರ್ ಬಂದ್, ವಂಶವೃಕ್ಷ, ಮರಣ ದೃಢೀಕರಣ ಪತ್ರ, ನೈಜ ದೃಢೀಕೃತ ದಾಖಲೆಗಳೊಂದಿಗೆ ಹಾಜರಾಗಿ ಇದರ ಸದುಪಯೋಗವನ್ನು ಪಡೆದುಕೊಳ್ಳು ವಂತೆ ಪ್ರಕಟಣೆ ತಿಳಿಸಿದೆ.