ಮಡಿಕೇರಿ, ಜು. ೪: ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಈರ್ವರು ಆರೋಪಿಗಳನ್ನು ಬಂಧಿಸುವಲ್ಲಿ ವೀರಾಜಪೇಟೆ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಮ್ಮತ್ತಿ ನಿವಾಸಿ ಎನ್.ಎ. ಪೊನ್ನಣ್ಣ (೪೬) ಹಾಗೂ ವೀರಾಜಪೇಟೆ ಸುಂಕದಕಟ್ಟೆ ನಿವಾಸಿ ಹೆಚ್.ಆರ್. ಲೋಹಿತ್ (೨೬) ಬಂಧಿತ ಆರೋಪಿಗಳು. ಅಮ್ಮತ್ತಿಯ ಮುತ್ತಪ್ಪ ದೇವಾಸ್ಥಾನ ಸಮೀಪ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಸಂದರ್ಭ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು

(ಮೊದಲ ಪುಟದಿಂದ) ಆರೋಪಿಗಳನ್ನು ಬಂಧಿಸಿ ೧೦೪ ಗ್ರಾಂ ತೂಕದ ಗಾಂಜಾ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮಾದಕ ವ್ಯಸನ ಬಳಕೆ ಹಾಗೂ ಮಾರಾಟ ಕಂಡುಬAದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಅಥವಾ ಕೆಪಿಎಸ್ ತಂತ್ರಾAಶದ ಮೂಲಕ ಮಾಹಿತಿ ನೀಡಿ ಕೈಜೋಡಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.