ವೀರಾಜಪೇಟೆ, ಜು. ೫: ಪಟ್ಟಣದ ಸೆಂಟ್ ಆ್ಯನ್ಸ್ ಪದವಿ ಕಾಲೇಜಿನಲ್ಲಿ ಕಾಲೇಜಿನ ಉದ್ಯೋಗ ಘಟಕ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ‘ಲಿಂಕ್ಡ್ಇನ್ ಪ್ರೊಫೈಲ್’ ಬಗ್ಗೆ ಅಂರ್ರಾಷ್ಟಿçÃಯ ವೆಬಿನಾರ್ ಕಾರ್ಯಕ್ರಮ ನಡೆಯಿತು.
ಕಾಲೇಜಿನ ಹಳೆಯ ವಿದ್ಯಾರ್ಥಿ ಹಾಗೂ ಉತ್ತರ ಅಮೇರಿಕಾದಲ್ಲಿ ವ್ಯವಹಾರ ಹಾಗೂ ವ್ಯಾಪಾರ ತಜ್ಞರಾಗಿರುವ ಅನುಷ್ ಜೋಯಾ ಎನ್. ಜೆ. ಅವರು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ಗಳಿಸಲು ‘ಲಿಂಕ್ಡ್ಇನ್ ಪ್ರೊಫೈಲ್’ನ ಅಗತ್ಯವಿದೆ. ಆ ಪ್ರೊಫೈಲ್ ಜಾಗತಿಕ ಮಟ್ಟದಲ್ಲಿ ಸಂಪರ್ಕವನ್ನು ಸಾಧಿಸಲು ಅಗತ್ಯವಾಗಿದೆ. ಯಾವುದೇ ಕ್ಷೇತ್ರದಲ್ಲಿ ಗುರಿ ಮುಟ್ಟಲು, ಉದ್ಯೋಗ ಪಡೆಯಲು ಈ ಪ್ರೊಫೈಲ್ ಅತ್ಯಗತ್ಯವಾಗಿದೆ. ಅಭ್ಯರ್ಥಿಗಳೇ ಈ ಪ್ರೊಫೈಲ್ ತಯಾರಿಸುವುದರಿಂದ ಗುಣಮಟ್ಟವನ್ನು ಕಾಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಲಿಂಕ್ ಡಿನ್ ಪ್ರೊಫೈಲ್ ತಯಾರಿ ಬಗ್ಗೆ ಉದಾಹರಣೆ ಸಮೇತ ವಿವರಿಸಿದರು.
ಸೆಂಟ್ ಆ್ಯನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿ ಅಂತಿಮ ಪದವಿ ವಿದ್ಯಾರ್ಥಿಗಳು ಈ ವೆಬಿನಾರ್ನ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಆ ಮೂಲಕ ಉದ್ಯೋಗ ಪಡೆಯಲು ಕಾರ್ಯೋನ್ಮುಖರಾಗಬೇಕೆಂದರು.
ಈ ಸಂದರ್ಭದಲ್ಲಿ ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಜೋಯ್ಸನ್ ಲೋಬೋ, ಉದ್ಯೋಗ ಘಟಕದ ಅಧಿಕಾರಿ ಶಿಲ್ಪಾ, ಉಪನ್ಯಾಸಕರು ಉಪಸ್ಥಿತರಿದ್ದರು. ಉಪನ್ಯಾಸಕಿ ಶಾಜೀರಾ ಸ್ವಾಗತಿಸಿ ವಂದಿಸಿದರು.
ಈ ವೆಬಿನಾರ್ನಲ್ಲಿ ಅಂತಿಮ ಪದವಿ ಹಾಗೂ ಸ್ನಾತಕೋತ್ತರ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.