ವೀರಾಜಪೇಟೆ, ಜು. ೫: ಕೊಡಗು ಜಿಲ್ಲೆ ವಿದ್ಯುತ್ ಪರಿವೀಕ್ಷಣಾಲಯ ವತಿಯಿಂದ ವೀರಾಜಪೇಟೆಯ ಎ-ಜೆಡ್ ಸಭಾಂಗಣದಲ್ಲಿ ರಾಷ್ಟಿçÃಯ ವಿದ್ಯುತ್ ಸುರಕ್ಷತಾ ಸಪ್ತಾಹ - ೨೦೨೩ರ ಅಂಗವಾಗಿ ವಿದ್ಯುತ್ ಸುರಕ್ಷತೆಗೆ ಸಂಬAಧಿಸಿದAತೆ ಜಾಗೃತಿ ಕಾರ್ಯಕ್ರಮ ನಡೆಯಿತು.

ಮಡಿಕೇರಿ ಉಪ ವಿದ್ಯುತ್ ಪರಿವೀಕ್ಷಕರಾದ ಅಮಿತ್ ಹೆಚ್.ವಿ. ಅವರು ವಿದ್ಯುತ್ ಸುರಕ್ಷತೆ ಬಗ್ಗೆ ಮಾಹಿತಿ ನೀಡಿ ವಿದ್ಯುತ್ ಸರಬರಾಜುದಾರರು, ಕೆಲಸಗಾರರ ವಿದ್ಯುತ್ ಸುರಕ್ಷತೆಯ ೧೦ ತತ್ವಗಳು, ವಿದ್ಯುತ್ ಸುರಕ್ಷಿತ ಮಾರ್ಗಸೂಚಿಗಳ ಬಗ್ಗೆ ಮಾಹಿತಿಯಿತ್ತರು.

ವೀರಾಜಪೇಟೆ ವಿದ್ಯುತ್ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸುರೇಶ್ ಅವರು ವಿದ್ಯುತ್ ಸುರಕ್ಷತೆ ಬಗ್ಗೆ ಮಾತನಾಡಿ ಗೃಹ ಬಳಕೆ ವಿದ್ಯುತ್ ಗ್ರಾಹಕರು ಗಮನಿಸಬೇಕಾದ ಅಂಶಗಳು, ಗ್ರಾಹಕರು ಮಾಡಬಾರದ ಅಂಶಗಳ ಬಗ್ಗೆ ತಿಳಿಸಿದರಲ್ಲದೆ ಇಲಾಖೆಯ ಸಿಬ್ಬಂದಿಗಳು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿವರಿಸಿದರು.

ವೀರಾಜಪೇಟೆ ತಾಲೂಕಿನ ಎಲ್ಲಾ ವಿದ್ಯುತ್ ಗುತ್ತಿಗೆದಾರರು, ಪವರ್ ಮ್ಯಾನ್‌ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಸುರಕ್ಷತೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಿಕೊಂಡರು. ಈ ಸಂದರ್ಭ ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿದಾರರ ಸಂಘದ ರಾಜ್ಯ ಸಮಿತಿ ಸದಸ್ಯ ಬಿ.ಎಂ. ಗಣೇಶ್ ಸೇರಿದಂತೆ ವೀರಾಜಪೇಟೆ ವಿದ್ಯುತ್ ಇಲಾಖೆಯ ಅಧಿಕಾರಿಗಳು ಇದ್ದರು.