ಕರಿಕೆ, ಜು. ೫: ಜಿಲ್ಲೆಯಲ್ಲಿ ವರುಣನ ಆರ್ಭಟ ಹೆಚ್ಚುತ್ತಿದ್ದು, ಕೇರಳ ಹಾಗೂ ಕರಾವಳಿಯಲ್ಲಿ ಮಳೆ ಹೆಚ್ಚಾದ ಕಾರಣ ಇದಕ್ಕೆ ಹೊಂದಿಕೊAಡಿರುವ ಗ್ರಾಮೀಣ ಭಾಗವಾದ ಕರಿಕೆಯಲ್ಲು ಮಳೆಯ ತೀವ್ರತೆ ಹೆಚ್ಚಾಗಿದೆ. ಇದರಿಂದಾಗಿ ಬತ್ತಿ ಹೋಗಿದ್ದ ನದಿ ತೊರೆಗಳು ತುಂಬಲಾರAಭಿಸಿದ್ದು, ಕಳೆದ ಬಾರಿ ತೀವ್ರ ಗುಡ್ಡ ಕುಸಿತಕ್ಕೊಳ ಗಾದ ಭಾಗಮಂಡಲ- ಕರಿಕೆ ಅಂತರ ರಾಜ್ಯ ಹೆದ್ದಾರಿ ಬದಿಯ ಗುಡ್ಡ ಈ ಬಾರಿ ಕೂಡ ಹತ್ತಾರು ಕಡೆ ಕುಸಿಯುವ ಭೀತಿ ಉಂಟಾಗಿದೆ. ಮತ್ತೊಂದೆಡೆ ಮಳೆ ನೀರು ರಸ್ತೆಯ ಮೇಲೆ ಹರಿದು ಹೋಗಿ ರಸ್ತೆಗೆ ಕೂಡ ಹಾನಿಯಾಗುತ್ತಿದ್ದು, ಇದನ್ನು ಸರಿಪಡಿಸಬೇಕಾಗಿದ್ದ ಸಂಬAಧಿಸಿದ ಲೋಕೋಪಯೋಗಿ ಇಲಾಖೆ ಮಾತ್ರ ನಿರ್ಲಕ್ಷö್ಯ ವಹಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. -ಸುಧೀರ್ ಹೊದ್ದೆಟ್ಟಿ