ಮಡಿಕೇರಿ, ಜು. ೫: ಯುವತಿಯೋರ್ವಳು ನಾಪತ್ತೆಯಾಗಿರುವ ಕುರಿತು ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾ ಗಿದೆ. ಮೂಲತಃ ಚಿಕ್ಕಮಗಳೂರು ನರಸಿಂಹರಾಜ, ಸುಂಕದ ಕಟ್ಟೆಯ ನಿವಾಸಿ ಪ್ರಸ್ತುತ ಸೋಮವಾರಪೇಟೆ ತಾಲೂಕಿನ ಚೌಡ್ಲು ಗ್ರಾಮದ ಆರ್.ಎಂ.ಸಿ. ಮಾರ್ಕೆಟ್ ಬಳಿ ಫಯರ್ ಸ್ಟೇಷನ್‌ನಲ್ಲಿ ಸೈಟ್ ಇನ್‌ಚಾರ್ಜ್ ಆಗಿ ಕೆಲಸ ಮಾಡುತ್ತಿ ರುವ ಶಿವರಾಜಯ್ಯ ಮಠಾಧರ್ ಅವರ ಪುತ್ರಿ ಮಂಜುಳ ನಾಪತ್ತೆಯಾಗಿರುವ ಯುವತಿ. ೨೦ ವರ್ಷ ಪ್ರಾಯದ ಮಂಜುಳ ಕಳೆದ ಒಂದೂವರೆ ತಿಂಗಳ ಹಿಂದೆ ಚೌಡ್ಲುವಿಗೆ ತಾಯಿಯೊಂದಿಗೆ ಆಗಮಿಸಿದ್ದರು. ಇದೀಗ ಜೂನ್ ೨೭ರಿಂದ ನಾಪತ್ತೆಯಾಗಿದ್ದಾಳೆೆ. ಈಕೆ ಎನ್.ಆರ್.ಪುರ ಸರಕಾರಿ ಪ.ಪೂ. ಕಾಲೇಜಿನಲ್ಲಿ ಮೊದಲ ವರ್ಷದ ಬಿ.ಕಾಂ. ಓದುತ್ತಿದ್ದು, ಸುಮನ್ ಎಂಬವರೊAದಿಗೆ ಸ್ನೇಹ ವಿದ್ದು, ಅವರೊಂದಿಗೆ ಹೋಗಿರಬಹುದೆಂದು ಶಂಕೆ ವ್ಯಕ್ತಪಡಿಸಿ ತಂದೆ ಶಿವರಾಜಯ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಮಾಹಿತಿ ದೊರೆತಲ್ಲಿ ಎಸ್.ಪಿ. ಕಚೇರಿ (೨೨೯೦೦೦) ಅಥವಾ ಸೋಮವಾರ ಪೇಟೆ ಪೊಲೀಸ್ ಠಾಣೆ ೨೮೪೮೪೦, ೨೮೨೦೪೦ ಅಥವಾ ೯೪೮೦೮೦೪೯೫೨ ಸಂಖ್ಯೆಗೆ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ಕೋರಿದೆ.