ಚೆಟ್ಟಳ್ಳಿ, ಜು. ೫: ಸಹಕಾರ ಕ್ಷೇತ್ರದಲ್ಲಿ ೨೫ ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ ಸಮಾಜ ಸೇವಕ ಚೆಟ್ಟಳ್ಳಿ ಈರಳೆವಳಮುಡಿ ಗ್ರಾಮದ ಬಲ್ಲಾರಂಡ ಮಣಿ ಉತ್ತಪ್ಪ ಅವರಿಗೆ ಮಡಿಕೇರಿ ಕೊಡವ ಸಮಾಜದ ವತಿಯಿಂದ ಸಮಾಜದ ಅಧ್ಯಕ್ಷ ಮಂಡುವAಡ ಮುತ್ತಪ್ಪ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭ ಸಮಾಜದ ಜಂಟಿ ನಿರ್ದೇಶಕ ನಂದಿನೆರವAಡ ದಿನೇಶ್, ನಿರ್ದೇಶಕರುಗಳಾದ ಕೇಕಡ ವಿಜು ದೇವಯ್ಯ, ಕನ್ನಂಡ ಕವಿತ ಬೊಳ್ಳಪ್ಪ, ಬೊಪ್ಪಂಡ ಸರಳ ಕರುಂಬಯ್ಯ, ಕಾಂಡೆರ ಲಲ್ಲು ಕುಟ್ಟಪ್ಪ, ಪುತ್ತರಿರ ಕರುಣ್ ಕಾಳಯ್ಯ ಹಾಗೂ ಬಲ್ಲಾರಂಡ ಗಂಗಮ್ಮ ಉತ್ತಪ್ಪ, ವಕೀಲ ಬಲ್ಲಾರಂಡ ಕಂಠಿ ಕಾರ್ಯಪ್ಪ, ಕಂಬೀರAಡ ಅಂಬಿಕಾ ಹಾಜರಿದ್ದರು.