ಅತ್ಯಾಚಾರ-ಕೊಲೆ ಪ್ರಕರಣದ ಆರೋಪಿಯ ಮನೆ ಧ್ವಂಸ

ಫತೇಪುರ್(ಉತ್ತರಪ್ರದೇಶ), ಜು. ೫: ಫತೇಪುರ್ ಜಿಲ್ಲೆಯಲ್ಲಿ ೧೯ ವರ್ಷದ ಯುವತಿಯ ಮೇಲೆ ಅತ್ಯಾಚಾರ ಮತ್ತು ಹತ್ಯೆಗೈದ ಆರೋಪಿ ಸೋನು ಅಲಿಯಾಸ್ ಸಿಕಂದರ್ ಎಂಬ ವ್ಯಕ್ತಿಯ ನಿವಾಸದಲ್ಲಿ ಉತ್ತರ ಪ್ರದೇಶ ಪೊಲೀಸರು ಎರಡನೇ ಧ್ವಂಸ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ ೨೨ರ ಯುವತಿಯ ಮೇಲೆ ಅತ್ಯಾಚಾರ ನಡೆದಿದ್ದು ಎರಡು ದಿನಗಳ ನಂತರ ಸಂತ್ರಸ್ಥೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಇನ್ನು ಪ್ರಕರಣ ಸಂಬAಧ ಸೋನುನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಯಿತು. ಜೂನ್ ೨೨ ರಂದು, ರಾಧಾನಗರ ಪ್ರದೇಶದ ಹಳ್ಳಿಯೊಂದರ ಹುಡುಗಿಯೊಬ್ಬಳು ಮದುವೆಗೆ ಹಾಜರಾಗಲು ಬಿಂಡ್ಕಿ ಕೊತ್ವಾಲಿ ಪ್ರದೇಶಕ್ಕೆ ಹೋಗಿದ್ದಳು. ಆಗ ಜ್ವಾಲಗಂಜ್ ನಿವಾಸಿ ಸೋನು ಅಲಿಯಾಸ್ ಸಿಕಂದರ್ ಅಲ್ಲಿಗೆ ಬಂದು ಆಕೆಯನ್ನು ಅಪಹರಿಸಿದ್ದಾನೆ. ಸಮೀಪದ ನಿರ್ಮಾಣ ಹಂತದಲ್ಲಿರುವ ಮನೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಆಕೆಗೆ ಇಟ್ಟಿಗೆಯಿಂದ ಹೊಡೆದಿದ್ದ. ಇದಕ್ಕೂ ಮೊದಲು ಜೂನ್ ೨೭ರಂದು ಅಧಿಕಾರಿಗಳು ಫತೇಪುರ್ ಜಿಲ್ಲೆಯ ಸೋನು ಅವರ ನಿವಾಸವನ್ನು ಧ್ವಂಸಗೊಳಿಸಲಾಗಿತ್ತು. ಉಪ ವಿಭಾಗೀಯ ಮ್ಯಾಜಿಸ್ಟೆçÃಟ್ (ಎಸ್‌ಡಿಎಂ) ಸೇರಿದಂತೆ ಹೆಚ್ಚಿನ ಸಂಖ್ಯೆಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಮತ್ತೊಮ್ಮೆ ಸ್ಥಳದಲ್ಲಿ ಧ್ವಂಸ ಕಾರ್ಯಾಚರಣೆ ನಡೆಸಲಾಯಿತು.

ರಾಜಸ್ಥಾನದಲ್ಲಿ ಲೆಸ್ಬಿಯನ್ ಪ್ರೇಮಕಥೆ

ಜೈಪುರ, ಜು. ೫: ರಾಜಸ್ಥಾನದ ಬಿಕಾನೇರ್ ಜಿಲ್ಲೆಯ ಸಣ್ಣ ಪಟ್ಟಣದಲ್ಲಿನ ಅಸಾಮಾನ್ಯ ಎನಿಸುವಂತ ಪ್ರೇಮಕಥೆಯೊಂದು ತೀವ್ರ ಉದ್ವಿಗ್ನತೆಯನ್ನು ಉಂಟುಮಾಡಿದೆ. ಜುಲೈ ೧ ರಂದು ೧೭ ವರ್ಷದ ಹಿಂದೂ ಹುಡುಗಿ ತನ್ನ ಮುಸ್ಲಿಂ ಶಿಕ್ಷಕಿಯೊಂದಿಗೆ ನಾಪತ್ತೆಯಾಗಿದ್ದಾಳೆ. ಘಟನೆಯನ್ನು ಲವ್ ಜಿಹಾದ್ ಎಂದು ಹಿಂದೂ ಪರ ಸಂಘಟನೆಗಳು ಆರೋಪಿಸಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಇಬ್ಬರೂ ಸೋಮವಾರ ರಾತ್ರಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋವನ್ನು ಬಿಡುಗಡೆ ಮಾಡಿದ್ದು, ತಾವು ಲೆಸ್ಬಿಯನ್ ಸಂಬAಧದಲ್ಲಿರುವುದಾಗಿ ಮತ್ತು ಒಟ್ಟಿಗೆ ಇರಲು ಸ್ವಇಚ್ಛೆಯಿಂದ ತಮ್ಮ ಮನೆಗಳನ್ನು ತೊರೆದಿದ್ದಾಗಿ ತಿಳಿಸಿದ್ದಾರೆ. ಅಲ್ಲದೆ, ಕೋಮು ಗಲಭೆಗಳಲ್ಲಿ ಪಾಲ್ಗೊಳ್ಳದಂತೆ ಜನರನ್ನು ಒತ್ತಾಯಿಸಿದ್ದಾರೆ ಮತ್ತು ನಮ್ಮ ಸಂಬAಧವನ್ನು ಒಪ್ಪಿಕೊಳ್ಳುವಂತೆ ಪೋಷಕರನ್ನು ವಿನಂತಿಸಿದ್ದಾರೆ.

ಕಾಶ್ಮೀರ: ಬಾರಾಮುಲ್ಲಾದಲ್ಲಿ ಲಷ್ಕರ್ ಉಗ್ರನ ಬಂಧನ

ಶ್ರೀನಗರ, ಜು. ೫: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಸಂಘಟನೆಯ ಉಗ್ರನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಉತ್ತರ ಕಾಶ್ಮೀರ ಜಿಲ್ಲೆಯ ಕ್ರೀರಿ ಪ್ರದೇಶದ ನೌಪೋರಾ ಜಾಗೀರ್ ಗ್ರಾಮದಲ್ಲಿ ಭಯೋತ್ಪಾದಕರ ಚಲನವಲನದ ಬಗ್ಗೆ ನಿರ್ದಿಷ್ಟ ಮಾಹಿತಿಯ ಮೇರೆಗೆ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸಿ, ಉಗ್ರನನ್ನು ಬಂಧಿಸಿವೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಶೋಧದ ವೇಳೆ, ಭದ್ರತಾ ಪಡೆಗಳನ್ನು ಗಮನಿಸಿದ ಶಂಕಿತ ಉಗ್ರ ಓಡಿಹೋಗಲು ಪ್ರಯತ್ನಿಸಿದನು. ಬಂಧಿತ ವ್ಯಕ್ತಿಯನ್ನು ಮೊಹಮ್ಮದ್ ಸೀದಿಕ್ ಲೋನ್ ಎಂದು ಗುರುತಿಸಿಲಾಗಿದ್ದು, ಕ್ರೀರಿಯ ನೌಪೋರಾ ಜಾಗೀರ್ ನಿವಾಸಿಯಾಗಿದ್ದಾನೆ ಎಂದು ವಕ್ತಾರರು ತಿಳಿಸಿದ್ದಾರೆ. ಬಂಧಿತ ಉಗ್ರನಿಂದ ಪಿಸ್ತೂಲ್, ಪಿಸ್ತೂಲ್ ಮ್ಯಾಗಜೀನ್ ಸೇರಿದಂತೆ ಹಲವು ಶಸ್ತಾçಸ್ತçಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಪ್ರಾಥಮಿಕ ವಿಚಾರಣೆಯ ಸಮಯದಲ್ಲಿ, ಲೋನ್, ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್‌ಇಟಿಯ ಭಯೋತ್ಪಾದಕ ಸಹಚರನಾಗಿ ಕೆಲಸ ಮಾಡುತ್ತಿರುವುದು ಮತ್ತು ಸಕ್ರಿಯ ಭಯೋತ್ಪಾದಕರಾದ ಸೋಪೋರ್‌ನ ಆದಿಲ್ ದಾಂಟೂ ಮತ್ತು ಪಾಕಿಸ್ತಾನದ ವಿದೇಶಿ ಭಯೋತ್ಪಾದಕ ಉಸ್ಮಾನ್ ಭಾಯಿ ಅವರೊಂದಿಗೆ ಸಂಪರ್ಕದಲ್ಲಿರುವುದು ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.