ಹೆಚ್.ಜೆ. ರಾಕೇಶ್
ಮಡಿಕೇರಿ, ಜು. ೩: ಮಳೆಗಾಲದ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ೪೪ ಭೂಕುಸಿತ ಹಾಗೂ ೪೩ ಪ್ರವಾಹ ಪೀಡಿತ ಸಂಭಾವ್ಯ ಪ್ರದೇಶಗಳನ್ನು ಜಿಲ್ಲಾಡಳಿತ ಗುರುತಿಸಿದ್ದು, ಪ್ರಾಕೃತಿಕ ವಿಕೋಪದಂತಹ ಪರಿಸ್ಥಿತಿ ಎದುರಾದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮೇಲ್ವಿಚಾರಣೆ ನಡೆಸುತ್ತಿದೆ. ಕಳೆದ ವರ್ಷಗಳಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದ ಪ್ರದೇಶಗಳನ್ನು ಅತೀ ಸೂಕ್ಷö್ಮ ಪ್ರದೇಶಗಳೆಂದು ಗುರುತು ಮಾಡಲಾಗಿದೆ.
೨೦೧೮ ರಿಂದ ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಬಂತೆAದರೆ ಭಯ ಆವರಿಸುತ್ತದೆ. ಎಂದು, ಏನಾಗುತ್ತೆ? ಎಂಬ ಆತಂಕದಲ್ಲಿ ಜನ ಜೀವನ ನಡೆಸುತ್ತಾರೆ. ಬೆಟ್ಟ, ಗುಡ್ಡ ಹಾಗೂ ನದಿಗಳ ಅಂಚಿನಲ್ಲಿ ವಾಸಿಸುವ ಜನರಂತು ಪ್ರಾಣ ಭಯದಲ್ಲಿರುತ್ತಾರೆ. ಈ ವರ್ಷ ಇನ್ನೂ ಕೊಡಗಿಗೆ ಮುಂಗಾರು ಪ್ರವೇಶಿಸಿಲ್ಲ. ಮಳೆರಾಯ ಅಬ್ಬರಿಸಿ ಬೊಬ್ಬೆರಿಯುತ್ತಿಲ್ಲ. ಯಾವುದೇ ಅನಾಹುತ ಸಂಭವಿಸದೆ ಕೃಷಿ ಹಾಗೂ ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಮಳೆಯಾಗಲಿ ಎಂದು ಜನ ಪ್ರಾರ್ಥಿಸಿಕೊಳ್ಳುತ್ತಿದ್ದಾರೆ.
ಮುಂದಿನ ಒಂದು ವಾರಗಳಲ್ಲಿ ಜಿಲ್ಲೆಗೆ ಮುಂಗಾರು ಪ್ರವೇಶ ಮಾಡಬಹುದು ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ. ಈ ಸಂದರ್ಭ ಮಳೆ ಬಿರುಸು ಪಡೆದುಕೊಳ್ಳುವ ಲಕ್ಷಣ ಇದೆ. ೨೦೧೮ ರಲ್ಲಿ ಯಾರೂ ಊಹಿಸದ ರೀತಿಯಲ್ಲಿ ಜಿಲ್ಲೆ ಪ್ರಾಕೃತಿಕ ವಿಕೋಪಕ್ಕೆ ತುತ್ತಾಯಿತು. ಅದಾದ ನಂತರದ ವರ್ಷಗಳಲ್ಲಿ ಸೂಕ್ತ ಕಟ್ಟೆಚ್ಚರವನ್ನು ಮಳೆಗಾಲದಲ್ಲಿ ಸರಕಾರ ಕೈಗೊಳ್ಳುತ್ತದೆ.
(ಮೊದಲ ಪುಟದಿಂದ) ಅದೇ ರೀತಿ ಈ ಬಾರಿಯೂ ಮುಂಜಾಗ್ರತ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ.
ಜಿಲ್ಲೆಯ ೫ ತಾಲೂಕಿನ ೪೪ ಪ್ರದೇಶಗಳನ್ನು ಭೂಕುಸಿತ, ಕಾವೇರಿ, ಲಕ್ಷö್ಮಣ ತೀರ್ಥ, ಹಟ್ಟಿಹೊಳೆ, ಪಯಸ್ವಿನಿ ನದಿಯ ಅಂಚಿನ ೪೩ ಗ್ರಾಮಗಳನ್ನು ಪ್ರವಾಹ ಪೀಡಿತ ಸಂಭಾವ್ಯ ಪ್ರದೇಶ ಎಂದು ಗುರುತಿಸಲಾಗಿದೆ. ೧೦೩ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಅಭಿವೃದ್ಧಿ ಅಧಿಕಾರಿಗಳಿಗೆ ಸೂಕ್ತ ಕ್ರಮವಹಿಸಲು ಸೂಚಿಸಲಾಗಿದೆ. ಕಳೆದ ಬಾರಿ ಅವಘಡ ಸಂಭವಿಸಿದ ಪ್ರದೇಶಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ.
ರಕ್ಷಣಾ ಪಡೆ ಸಜ್ಜು
ಈಗಾಗಲೇ ೨೫ ಮಂದಿಯನ್ನೊಳಗೊAಡ ಎನ್.ಡಿ.ಆರ್.ಎಫ್. ತಂಡ ಜಿಲ್ಲೆಯಲ್ಲಿ ಬೀಡು ಬಿಟ್ಟು ಸಮೀಕ್ಷೆ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಅಣಕು ಕಾರ್ಯಾಚರಣೆ ಮೂಲಕ ಜನರಲ್ಲಿ ಸ್ಥೆöÊರ್ಯ ತುಂಬುತ್ತಿದೆ. ಇದರೊಂದಿಗೆ ಪೊಲೀಸ್, ಅಗ್ನಿಶಾಮಕ ದಳ, ಗೃಹ ರಕ್ಷಕ ದಳ, ಅರಣ್ಯ ಇಲಾಖೆಯ ಆರ್.ಆರ್.ಟಿ. ಸಿಬ್ಬಂದಿಗಳು ರಕ್ಷಣಾ ಕಾರ್ಯಕ್ಕೆ ಸಜ್ಜಾಗಿದ್ದಾರೆ. ಇವರಿಗೆ ಅಗತ್ಯ ತರಬೇತಿಯೊಂದಿಗೆ ಬೇಕಾದ ಪರಿಕರಗಳನ್ನು ಜಿಲ್ಲಾಡಳಿತದಿಂದ ಒದಗಿಸಲಾಗಿದೆ. ಪ್ರಾಕೃತಿಕ ವಿಕೋಪದಂತಹ ಪರಿಸ್ಥಿತಿ ಸೃಷ್ಟಿಯಾದಲ್ಲಿ ತುರ್ತಾಗಿ ರಕ್ಷಣಾ ಪಡೆ ದೌಡಯಿಸಲಿದೆ.
ಪ್ರಕೃತಿ ವಿಕೋಪ ತುರ್ತು ಪರಿಹಾರ ಕಾರ್ಯಕ್ಕೆ ಜಿಲ್ಲೆಯ ೧೦೩ ಗ್ರಾಮ ಪಂಚಾಯ್ತಿಗಳಿಗೆ ಅಗತ್ಯ ಅನುದಾನ ನೀಡಲು ತೀರ್ಮಾನಿಸಲಾಗಿದೆ. ಕಳೆದ ವರ್ಷ ರೂ. ೫೦ ಸಾವಿರ ಅನುದಾನವನ್ನು ಇದಕ್ಕಾಗಿ ನೀಡಲಾಗಿತ್ತು. ಕೆಲವು ಪಂಚಾಯಿತಿಗಳಲ್ಲಿ ಹಣ ಖರ್ಚಾಗದೆ ಹಾಗೆಯೇ ಉಳಿದಿದೆ. ಅದನ್ನು ಈ ವರ್ಷ ಅವಶ್ಯಕತೆ ಇದ್ದಲ್ಲಿ ಬಳಸಿಕೊಳ್ಳಲಾಗುತ್ತದೆ.
ಜೊತೆಗೆ ತಹಶೀಲ್ದಾರ್ಗಳ ಖಾತೆಗೆ ಮಳೆಗಾಲ ನಿರ್ವಹಣೆಗೆಂದು ಹಣ ಬಿಡುಗಡೆಗೊಳಿಸಲಾಗುತ್ತದೆ. ನಗರಸಭೆ, ಪಟ್ಟಣ ಪಂಚಾಯ್ತಿಗಳಿಗೆ ಹಣ ಒದಗಿಸಲಾಗುತ್ತದೆ. ಪ್ರಕೃತಿ ವಿಕೋಪ ಸಂಬAಧ ತಕ್ಷಣ ಸ್ಪಂದಿಸಲು ಜಿಲ್ಲಾಧಿಕಾರಿ ಕಛೇರಿ ಮತ್ತು ತಾಲೂಕು ಕಚೇರಿಯಲ್ಲಿ ೨೪ಘಿ೭ ಕಾರ್ಯನಿರ್ವಹಿಸುವ ನಿಯಂತ್ರಣ ಕೊಠಡಿಯನ್ನು ಸನ್ನದ್ಧವಾಗಿರಿಸಲಾಗಿದೆ.
ಪರಿಹಾರ ಕೇಂದ್ರ ಗುರುತು
ಅನಾಹುತ ಸಂಭವಿಸಿದ್ದಲ್ಲಿ ನಿರಾಶ್ರಿತರು ತಂಗಲು ಪರಿಹಾರ ಕೇಂದ್ರಗಳನ್ನು ಜಿಲ್ಲಾಡಳಿತ ಗುರುತಿಸಿದೆ. ಆಯಾ ವ್ಯಾಪ್ತಿಯ ಶಾಲೆ, ಸಭಾಂಗಣ, ಕಲ್ಯಾಣ ಮಂಟಪಗಳನ್ನು ಪಟ್ಟಿ ಮಾಡಲಾಗಿದೆ. ಅವರಿಗೆ ಬೇಕಾದ ಆಹಾರವನ್ನು ಒದಗಿಸಲು ಆಹಾರ ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಿ ಸ್ಥಳೀಯ ವ್ಯಾಪಾರಿಗಳ ಮೂಲಕ ಖರೀದಿಸಲಾಗುವುದು.
ಸಮರ್ಥವಾಗಿ ಪ್ರಾಕೃತಿಕ ವಿಕೋಪ ಎದುರಿಸುವ ನಿಟ್ಟಿನಲ್ಲಿ ಜಿಲ್ಲೆಯ ೧೬ ಹೋಬಳಿಗಳಿಗೆ ತಲಾ ಒಬ್ಬರು ನೋಡೆಲ್ ಹಾಗೂ ತಲಾ ಒಬ್ಬರು ಸಹಾಯಕ ನೋಡೆಲ್ ಅಧಿಕಾರಿಗಳನ್ನು ನಿಯೋಜಿಸಿ ಕ್ರಮವಹಿಸಲಾಗಿದೆ.
ಅಗತ್ಯವಿರುವ ಜೆಸಿಬಿ, ಹಿಟಾಚಿ ಅಂತಹ ರಕ್ಷಣಾ ಕಾರ್ಯಕ್ಕೆ ಬಳಕೆಯಾಗುವ ವಾಹನಗಳನ್ನು ಗುರುತಿಸಿಟ್ಟುಕೊಳ್ಳಲಾಗಿದೆ. ಗ್ರಾಮ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ, ಜಿಲ್ಲಾ ಮಟ್ಟದಲ್ಲಿ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಟಾಸ್ಕ್ಫೋರ್ಸ್ ಈಗಾಗಲೇ ರಚನೆ ಮಾಡಲಾಗಿದೆ.
ಮಳೆ ತೀವ್ರತೆ ಹೆಚ್ಚಾದಲ್ಲಿ ಸೂಕ್ಷö್ಮ ಪ್ರದೇಶ ನಿವಾಸಿಗಳಿಗೆ ನೋಟೀಸ್ ನೀಡಿ ಸ್ಥಳಾಂತರಗೊಳಿಸಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರೊಂದಿಗೆ ಸಿದ್ದಾಪುರದ ನದಿ ಅಂಚಿನ ನಿವಾಸಿಗಳಿಗೆ ಕಳೆದ ಕೆಲವು ದಿನಗಳ ಹಿಂದೆಯೇ ನೋಟೀಸ್ ನೀಡಿ ಸ್ಥಳಾಂತರಕ್ಕೆ ಸೂಚಿಸಲಾಗಿತ್ತು.