ಮಡಿಕೇರಿ, ಜು. ೩: ಜೂನ್ ೧೧ರಿಂದ ರಾಜ್ಯದಲ್ಲಿ ಪ್ರಾರಂಭಗೊAಡ ನೂತನ ಸರಕಾರದ ಮಹಿಳೆಯರು ಉಚಿತ ಪ್ರಯಾಣ ನಡೆಸಲು ಅನುವು ಮಾಡಿಕೊಟ್ಟಿದೆ. ೨೦೦ ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸುವ ಗ್ರಾಹಕರಿಗೆ ಉಚಿತ ವಿದ್ಯುತ್ ಕಲ್ಪಿಸುವ ಯೋಜನೆಯಡಿ ಯಲ್ಲಿಯೂ ಸಾವಿರಾರು ಮಂದಿ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈ ಯೋಜನೆ ಎಂದಿನಿAದ ಜಾರಿಗೆ ಬರುತ್ತದೆ ಎನ್ನುವುದು ಖಾತರಿಯಾಗಿ ಸರ್ಕಾರದಿಂದ ಸಂಬAಧಿತ ಅಧಿಕಾರಿಗಳಿಗೆ ಇನ್ನೂ ಸೂಕ್ತ ನಿರ್ದೇಶನ ದೊರಕಿಲ್ಲ. ಅನ್ನಭಾಗ್ಯ ಯೋಜನೆಯಡಿ ಈ ಹಿಂದಿನ ಸರಕಾರ ಪ್ರತಿ ಬಿಪಿಎಲ್ ಕಾರ್ಡುದಾರರ ಕುಟುಂಬಗಳಿಗೆ ನೀಡುತ್ತಿದ್ದ ೬ ಕೆ.ಜಿ. ಅಕ್ಕಿ ಈ ತಿಂಗಳಿನಿAದ ೫ ಕೆ.ಜಿ.ಗೆ ಇಳಿದಿದೆ. ಈಗಿನ ಸರಕಾರ ಅಧಿಕ ೫ ಕೆ.ಜಿ. ಮಡಿಕೇರಿ, ಜು. ೩: ಜೂನ್ ೧೧ರಿಂದ ರಾಜ್ಯದಲ್ಲಿ ಪ್ರಾರಂಭಗೊAಡ ನೂತನ ಸರಕಾರದ ಮಹಿಳೆಯರು ಉಚಿತ ಪ್ರಯಾಣ ನಡೆಸಲು ಅನುವು ಮಾಡಿಕೊಟ್ಟಿದೆ. ೨೦೦ ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸುವ ಗ್ರಾಹಕರಿಗೆ ಉಚಿತ ವಿದ್ಯುತ್ ಕಲ್ಪಿಸುವ ಯೋಜನೆಯಡಿ ಯಲ್ಲಿಯೂ ಸಾವಿರಾರು ಮಂದಿ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈ ಯೋಜನೆ ಎಂದಿನಿAದ ಜಾರಿಗೆ ಬರುತ್ತದೆ ಎನ್ನುವುದು ಖಾತರಿಯಾಗಿ ಸರ್ಕಾರದಿಂದ ಸಂಬAಧಿತ ಅಧಿಕಾರಿಗಳಿಗೆ ಇನ್ನೂ ಸೂಕ್ತ ನಿರ್ದೇಶನ ದೊರಕಿಲ್ಲ. ಅನ್ನಭಾಗ್ಯ ಯೋಜನೆಯಡಿ ಈ ಹಿಂದಿನ ಸರಕಾರ ಪ್ರತಿ ಬಿಪಿಎಲ್ ಕಾರ್ಡುದಾರರ ಕುಟುಂಬಗಳಿಗೆ ನೀಡುತ್ತಿದ್ದ ೬ ಕೆ.ಜಿ. ಅಕ್ಕಿ ಈ ತಿಂಗಳಿನಿAದ ೫ ಕೆ.ಜಿ.ಗೆ ಇಳಿದಿದೆ. ಈಗಿನ ಸರಕಾರ ಅಧಿಕ ೫ ಕೆ.ಜಿ. ಇಲಾಖೆಗೆ ಇನ್ನೂ ಸ್ಪಷ್ಟ ನಿರ್ದೇಶನ ದೊರಕಿಲ್ಲ. ಮಹಿಳೆಯರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಬಳಿಕ ಆ ಅರ್ಜಿಗಳು ಐಟಿ ಇಲಾಖೆಗೆ ಕಳುಹಿಸಲ್ಪಟ್ಟು ಸ್ಕಿçÃನಿಂಗ್ ಆಗಬೇಕಿದೆ. ಅದೇ ರೀತಿ ಜಿಎಸ್ಟಿ ಪಾವತಿಸುವ ಕುಟುಂಬ ವರ್ಗದ ಸದಸ್ಯರ ಕುರಿತು ಮಾಹಿತಿ ಪಡೆಯಬೇಕಾಗಿದೆ. ಏಕೆಂದರೆ ವರಮಾನ ತೆರಿಗೆ ಕಟ್ಟುವ, ಜಿಎಸ್ಟಿ ಪಾವತಿಸುವ ಕುಟುಂಬದ ಯಜಮಾನಿಗೆ ಗೃಹಲಕ್ಷಿö್ಮಯ ಹಣ ಲಭ್ಯವಾಗುವುದಿಲ್ಲ. ಇನ್ನು ಯುವನಿಧಿಯ ಯೋಜನೆ ಕುರಿತು ಗಮನಿಸಿದಾಗ ಈ ವರ್ಷ ಜಿಲ್ಲೆಯ ೧೩೦ ಮಂದಿ ನಿರು ದ್ಯೋಗಿಗಳಿಗೆ ಈ ಅವಕಾಶ ಸಿಗುವ ಬಗ್ಗೆ ಮಾಹಿತಿ ದೊರೆತಿದ್ದು, ಆ ಕುರಿತು ಸರಕಾರ ಇನ್ನೂ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ.
ಶಕ್ತಿ ಯೋಜನೆ
ಜಿಲ್ಲೆಯಲ್ಲಿ ಶಕ್ತಿ ಯೋಜನೆ ಅನ್ವಯ ಜೂನ್ ೩೦ರವರೆಗೆ ೨,೬೭,೪೩೦ ಮಂದಿ ಕೊಡಗಿನ ಮಹಿಳೆಯರ ಉಚಿತ ಪ್ರಯಾಣ ನಡೆಸಿದ್ದಾರೆ. ಈ ಪ್ರಯಾಣಿಕರ ಒಟ್ಟು ಟಿಕೆಟ್ ಮೌಲ್ಯ ೧,೦೦,೨೧೧,೫೩ ಎಂಬ ಬಗ್ಗೆ ಜಿಲ್ಲಾ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕಿ ಗೀತಾ ಅವರು ಖಾತರಿಪಡಿಸಿದ್ದಾರೆ. ಇದು ಕೆಎಸ್ ಆರ್ಟಿಸಿಗೆ ಲಭ್ಯವಾದ ಆದಾಯ ಎಂದು ಪರಿಗಣಿಸಲಾಗಿದೆ. ಆದರೆ ಈ ಹಣವನ್ನು ರಾಜ್ಯ ಸರ್ಕಾರ ತನ್ನ ಗ್ಯಾರಂಟಿ ಯೋಜನೆ ಅನ್ವಯ ಭರ್ತಿ ಮಾಡಬೇಕಾಗಿದೆ. ಪ್ರಾರಂಭದ ಜೂ.೧೧ರಂದು ಕೇವಲ ೧೦೮೬ ಮಹಿಳೆಯರು ಪ್ರಯಾಣಿಸಿದ್ದು, ರೂ. ೪೦,೦೪೮ ಆದಾಯ ಲಭ್ಯವಾಗಿತ್ತು. ದಿನದಿಂದ ದಿನಕ್ಕೆ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದು, ಜೂನ್ ೨೦ರಂದು ಅತ್ಯಧಿಕ ಸಂಖ್ಯೆಯ ಅಂದರೆ ೧೬,೨೭೪ ಮಂದಿ ಮಹಿಳೆಯರು ಪ್ರಯಾಣಿಸಿದ್ದರು. ಟಿಕೆಟ್ ದರದ ಅನ್ವಯ ಲಭ್ಯವಾದ ಆದಾಯ ರೂ. ೫,೯೨,೨೩೧ ಆದರೆ, ಜೂನ್ ೧೯ ರಂದು ಇದಕ್ಕಿಂತ ಕಡಿಮೆ ಪ್ರಯಾಣಿಕರು ಅಂದರೆ, ೧೫,೧೯೩ ಇದ್ದರೂ ದೂರದ ಊರುಗಳಿಗೆ ಪ್ರಯಾ ಣದಿಂದಾಗಿ ಟಿಕೆಟ್ ದರ ಅಧಿಕ ಗೊಂಡಿದ್ದು, ಕೆಎಸ್ಆರ್ಟಿಸಿಗೆ ಲಭ್ಯವಾದ ಆ ದಿನದ ಆದಾಯ ರೂ. ೬,೪೩,೭೭೬.
ಗೃಹಜ್ಯೋತಿ ಯೋಜನೆ
೨೦೦ ಯೂನಿಟ್ಗಿಂತ ಮಾಸಿಕ ವಾಗಿ ಕಡಿಮೆ ವಿದ್ಯುತ್ ಬಳಸುವ ಗ್ರಾಹಕರಿಗೆ ಉಚಿತ ವಿದ್ಯುತ್ ಕಲ್ಪಿಸುವ ಸರ್ಕಾರದ ಯೋಜನೆಯಡಿ ಕೊಡಗಿನ ಗ್ರಾಹಕರು ಈಗಾಗಲೇ ಸಾಕಷ್ಟು ಅರ್ಜಿಗಳನ್ನು ದಾಖಲಿಸಿ ದ್ದಾರೆ. ಜಿಲ್ಲಾ ಸೆಸ್ಕ್ನ ಕಾರ್ಯಪಾಲಕ ಅಭಿಯಂತರರಾದ ಅನಿತಾಬಾಯಿ ಅವರ ಪ್ರಕಾರ ಈಗಾಗಲೇ ೬೭,೮೩೦ ಗ್ರಾಹಕರು ಗೃಹಜ್ಯೋತಿ ಸೌಲಭ್ಯ ಪಡೆಯಲು ಅರ್ಜಿ ನೊಂದಾವಣೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಗೃಹೋಪ ಯೋಗಿ ಮತ್ತು ಭಾಗ್ಯಜ್ಯೋತಿ ಯೋಜನೆ ಅನ್ವಯದ ವಿದ್ಯುತ್ ಸಂಪರ್ಕ ಹೊಂದಿರುವ ಗ್ರಾಹಕ ರೊಂದಿಗೆ ಉದ್ಯಮ ವಲಯದ ಕೈಗಾರಿಕೆಗಳನ್ನೂ ಒಳಗೊಂಡ ಒಟ್ಟು ೨,೨೦,೩೫೨ ಮಂದಿ ಗ್ರಾಹಕರಿದ್ದಾರೆ. ಈ ಪೈಕಿ ಸೌಲಭ್ಯ ಲಭಿಸಲು ಅವಕಾಶ ಪಡೆದಿರುವ ೧,೭೮,೭೩೮ ಗ್ರಾಹಕರ ಪೈಕಿ ಎಲ್ಟಿ-೧ ವರ್ಗದ ಭಾಗ್ಯಜ್ಯೋತಿ ಯೋಜನೆಯ ಫಲಾನುಭವಿಗಳು ಹಾಗೂ ಎಲ್ಟಿ-೨ ವರ್ಗದ ಗೃಹೋಪಯೋಗಿ ವಿದ್ಯುತ್ ಬಳಕೆ ದಾರರು ಸೇರಿದ್ದಾರೆ. ಆದರೆ, ಇವರೆಲ್ಲರಿಗೂ ಕೂಡ ಈ ಯೋಜನೆಯ ಸೌಲಭ್ಯ ದೊರಕು ವುದಿಲ್ಲ. ಈ ಪೈಕಿ ಕಳೆದ ವರ್ಷದ ವಿದ್ಯುತ್ ಬಳಕೆಯ ಸರಾಸರಿಯನ್ನು ಪರಿಗಣಿಸಿ ೨೦೦ ಯೂನಿಟ್ಗಿಂತ ಕಡಿಮೆ ಬಳಸಿದವರಿಗೆ ಮಾತ್ರ ಈ ಸೌಲಭ್ಯ ಲಭ್ಯವಾಗುತ್ತದೆ. ಆದರೆ ಈ ಅರ್ಜಿ ಸಲ್ಲಿಸಿದವರಿಗೂ ಯಾವ ತಿಂಗಳಿನಿAದ ಈ ಯೋಜನೆಯ ಸೌಲಭ್ಯ ದೊರೆಯುತ್ತದೆ ಎನ್ನುವುದು ಇನ್ನೂ ಖಚಿತಗೊಂಡಿಲ್ಲ. ಈ ನಡುವೆ ಕಳೆದ ಮೇ, ಜೂನ್ ತಿಂಗಳಲ್ಲಿ ಹಳೆಯ ಯಾವ್ಯಾವುದೋ ಲೆಕ್ಕಗಳನ್ನು ಸೇರಿಸಿ ಸೆಸ್ಕ್ ದುಬಾರಿ ಬಿಲ್ಗಳನ್ನು ನೀಡಿತ್ತು. ಈ ಮೊತ್ತವನ್ನು ಅನೇಕ ಗ್ರಾಹಕರು ಒಮ್ಮೆಗೆ ಪಾವತಿಸಲು ಸಾಧ್ಯವಾ ಗದವರಿಗೆ ಸೆಸ್ಕ್ ಕಂತಿನಲ್ಲಿ ಬಾಕಿ ಹಣವನ್ನು ಪಾವತಿಸಲು ಅವಕಾಶ ಕಲ್ಪಿಸಿದೆ ಎಂದು ಅನಿತಾ ಬಾಯಿ ಮಾಹಿತಿ ನೀಡಿದ್ದಾರೆ. ಮುಂದಿನ ಸೆಪ್ಟೆಂಬರ್ವರೆಗೂ
(ಮೊದಲ ಪುಟದಿಂದ) ಪಾವತಿಸಲು ಕಾಲಾವಧಿ ಇರುವುದಾಗಿ ತಿಳಿಸಿದ್ದಾರೆ.
ಅನ್ನಭಾಗ್ಯ ಯೋಜನೆ
ಅನ್ನಭಾಗ್ಯ ಯೋಜನೆ ಅನ್ವಯ ಕೊಡಗಿನಲ್ಲಿ ೧,೦೧,೬೬೬ ಮಂದಿ ಬಿಪಿಎಲ್ ಕಾರ್ಡುದಾರರು ಇದ್ದಾರೆ. ಈ ಕಾರ್ಡುದಾರರ ಕುಟುಂಬದ ೩,೦೮,೩೬೧ ಮಂದಿ ಉಚಿತ ೧೦ ಕೆ.ಜಿ. ಅಕ್ಕಿ ಪಡೆಯಲು ಅವಕಾಶ ಹೊಂದಿ ದ್ದಾರೆ. ಅದೇ ರೀತಿ ಜಿಲ್ಲೆಯಲ್ಲಿ ೯,೮೮೦ ಮಂದಿ ಅಂತ್ಯೋದಯ ಕಾರ್ಡುದಾರರಿದ್ದು, ಆ ಪೈಕಿ ೩೨,೨೨೩ ಮಂದಿ ಕುಟುಂಬ ಸದಸ್ಯರು ಫಲಾನುಭವಿಗಳಾಗಿದ್ದಾರೆ. ಈಗಾ ಗಲೇ ಅಂತ್ಯೋದಯ ಕಾರ್ಡುದಾ ರರು ತಲಾ ಕಾರ್ಡ್ಗೆ ೩೫ ಕೆ.ಜಿ. ಅಕ್ಕಿ ಸೌಲಭ್ಯವನ್ನು ಪಡೆಯುತ್ತಿದ್ದಾರೆ.
ರಾಜ್ಯ ಸರ್ಕಾರವು ಈ ಫಲಾ ನುಭವಿಗಳಿಗೆ ಅಧಿಕ ೫ ಕೆ.ಜಿ.ಯ ಹಣವನ್ನು ನೀಡುವುದಾಗಿ ಘೋಷಿಸಿದ್ದರೂ ಈ ಸಂಬAಧ ಯಾವ ರೀತಿ ಪಾವತಿಸಬೇಕೆನ್ನುವ ಕುರಿತು ಸೂಕ್ತ ನಿರ್ದೇಶನ ನೀಡಿಲ್ಲ ಅಥವಾ ಅದಕ್ಕೆ ಅಗತ್ಯವಾದ ಹಣವನ್ನು ಕೂಡ ಇನ್ನೂ ಇಲಾಖೆಗೆ ಒದಗಿಸಿಲ್ಲದಿರುವುದು ಕಂಡು ಬಂದಿದೆ. ಜಿಲ್ಲೆಯಲ್ಲಿ ಇದೀಗ ೧,೧೧,೫೪೬ ಮಂದಿ ಕಾರ್ಡುದಾರರಿಗೆ ೧೮,೮೮೬ ಕ್ವಿಂಟಾಲ್ ಅಕ್ಕಿ ಸರಕಾರ ದಿಂದ ಸರಬರಾಜಾಗುತ್ತದೆ.
ಗೃಹಲಕ್ಷಿö್ಮ ಯೋಜನೆ
ಗೃಹಲಕ್ಷಿö್ಮ ಯೋಜನೆ ಅನ್ವಯ ಪ್ರತಿ ಕುಟುಂಬದ ಯಜಮಾನಿಗೆ ೨ ಸಾವಿರ ನೀಡುವ ಕುರಿತು ಸರ್ಕಾರ ಘೋಷಿಸಿದೆ. ಆದರೆ ಈ ಹಿನ್ನೆಲೆ ಯಲ್ಲಿ ಯೋಜನೆಯ ಜಾರಿ ಕುರಿ ತಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಇದುವರೆಗೆ ಯಾವುದೇ ಸ್ಪಷ್ಟ ನಿರ್ದೇಶನ ನೀಡಿಲ್ಲ. ಜಿಲ್ಲೆಯ ಕೆಲವು ಮಹಿಳೆಯರು ರಾಜ್ಯಮಟ್ಟ ದಲ್ಲಿ ಕೇಳಿ ಬಂದ ಸುದ್ದಿ ಅನ್ವಯ ಗ್ರಾಮ-೧ ಆ್ಯಪ್ ಮೂಲಕ ಮೊಬೈಲ್ ಗಳಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಅರ್ಜಿ ಸಲ್ಲಿಕೆಗೆ ತಲಾ ರೂ. ೨೦ ಶುಲ್ಕವಿದ್ದು, ಈ ಹಣವನ್ನು ಸರಕಾರವೇ ಭರಿಸು ವುದಾಗಿ ಘೋಷಿಸಿದೆ.
ಯುವನಿಧಿ ಯೋಜನೆ
ಯುವನಿಧಿ ಯೋಜನೆ ನಿರುದ್ಯೋಗಿಗಳಿಗೆ ಉದ್ಯೋಗ ದೊರಕುವವರೆಗೆ ಮಾಸಿಕವಾಗಿ ನೀಡಲ್ಪಡುವ ಸಹಾಯ ಧನವಾಗಿದೆ. ಈ ಯೋಜನೆ ಅನ್ವಯ ಎಲ್ಲಾ ನಿರುದ್ಯೋಗಿ ಪದವೀಧರರಿಗೆ ಮಾಸಿಕ ರೂ. ೩೦೦೦ ಹಾಗೂ ಡಿಪ್ಲೊಮಾ ಪದವೀಧರರಿಗೆ ರೂ. ೧೫೦೦ ಸಹಾಯವಾಗಬೇಕಿದೆ. ಕೊಡಗಿನಲ್ಲಿ ಈ ರೀತಿ ಸುಮಾರು ೩೯೩೮ ಪದವೀಧರರಿದ್ದಾರೆ. ಆದರೆ, ಸರ್ಕಾರವು ಉದ್ಯೋಗ ವಿನಿಮಯ ಅಧಿಕಾರಿಗಳಿಗೆ ಸೂಚಿಸಿರುವ ಪ್ರಕಾರ ಈ ವರ್ಷದ ನಿರುದ್ಯೋಗಿ ಪದವೀಧರರ ಪಟ್ಟಿಯನ್ನು ಮಾತ್ರ ಕಳುಹಿಸುವಂತೆ ನಿರ್ದೇಶಿಸಿದೆ. ಇದರ ಅನ್ವಯ ಕೊಡಗಿನಲ್ಲಿ ೧೨೦ ಮಂದಿ ಪದವೀಧರ ನಿರುದ್ಯೋಗಿಗಳು, ೧೦ ಮಂದಿ ಡಿಪ್ಲೋಮಾ ಪದವೀಧರರಿ ದ್ದಾರೆ. ಈ ೧೩೦ ಮಂದಿಯ ಪಟ್ಟಿಯನ್ನು ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಉಮಾ ಅವರು ಸರಕಾರಕ್ಕೆ ಕಳುಹಿಸಿದ್ದಾರೆ.
ವರದಿ : “ಚಕ್ರವರ್ತಿ”
ಚಿತ್ರ : ಲಕ್ಷಿö್ಮÃಶ್