ಚೆಯ್ಯಂಡಾಣೆ, ಜು ೩. ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೀರಾಜಪೇಟೆ ವಲಯ ಅರಣ್ಯ ಇಲಾಖೆ ವತಿಯಿಂದ ವನ ಮಹೋತ್ಸವ ಕಾರ್ಯಕ್ರಮ ನಡೆಯಿತು. ಸ್ಥಳೀಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಉತ್ತಪ್ಪ ಭರತ್ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ವೀರಾಜಪೇಟೆ ವಲಯ ಆರ್ಎಫ್ಓ ಕಳ್ಳಿರ ದೇವಯ್ಯ, ಫಾರೆಸ್ಟರ್ಗಳಾದ ಅನಿಲ್, ಆನಂದ, ಅರುಣಾ ಹಾಗೂ ಕ್ಯಾಂಪ್ ಸಿಬ್ಬಂದಿಗಳಾದ ಸುರೇಶ್, ಭರತ್, ನಾಣಯ್ಯ, ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿ ರೋಹಿಣಿ, ಲ್ಯಾಬ್ ಟೆಕ್ನೀಷಿಯನ್ ಲೀಲಾವತಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.