ಪೆರಾಜೆ, ಜು. ೩: ಇಲ್ಲಿನ ಜ್ಯೋತಿ ಪ್ರೌಢಶಾಲೆಯಲ್ಲಿ ಚೊಕ್ಕಾಡಿ ಸತ್ಯಸಾಯಿ ಸೇವಾ ಕೇಂದ್ರದ ವತಿಯಿಂದ ಆರೋಗ್ಯ ಮಾಹಿತಿ ಹಾಗೂ ತಪಾಸಣಾ ಕಾರ್ಯಕ್ರಮ ಜ್ಯೋತಿ ವಿದ್ಯಾಸಂಘದ ಅಧ್ಯಕ್ಷ ಡಾ.ಎನ್.ಎ ಜ್ಞಾನೇಶ್ ನಿಡ್ಯಮಲೆ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಟ್ರಸ್ಟ್ನ ಸಂಚಾಲಕ ತೇಜಕುಮಾರ್ ಕೆ.ಬಿ, ಸೇವಾ ಟ್ರಸ್ಟ್ನ ಆಧ್ಯಾತ್ಮಿಕ ಜಿಲ್ಲಾ ಸಮಿತಿಯ ಜಯರಾಮ್ ಭಾರದ್ವಾಜ್ ವಿದ್ಯಾರ್ಥಿಗಳಿಗೆ ‘ಓಂಕಾರದ ಮಹತ್ವ’ ಎಂಬ ವಿಷಯದ ಬಗ್ಗೆ ಮಾಹಿತಿ ನೀಡಿದರು. ಉದ್ಯಾನವನ ಆಸ್ಪತ್ರೆಯ ವೈದ್ಯೆ ಸಾಯಿಗೀತ ಜ್ಞಾನೇಶ್ ಆರೋಗ್ಯ ಹಾಗೂ ಸ್ವಚ್ಛತೆ ಕಾಪಾಡವ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ, ವಿದ್ಯಾರ್ಥಿಗಳನ್ನು ತಪಾಸಣೆ ನಡೆಸಿ ಔಷಧಿಗಳನ್ನು ಉಚಿತವಾಗಿ ವಿತರಿಸಿದರು.
ಈ ಸಂದರ್ಭ ಕೆ.ವಿ.ಜಿ ಮೆಡಿಕಲ್ ಕಾಲೇಜಿನ ವೈದ್ಯರಾದ ಡಾ. ನಿತಿನ್, ಶಾಲಾ ಸಂಚಾಲಕರಾದ ಹರಿಶ್ಚಂದ್ರ ಮುಡ್ಕಜೆ, ವೇಣುಗೋಪಾಲ್ ಕೊಯಿಂಗಾಜೆ ಸೇರಿದಂತೆ ಅಧ್ಯಾಪಕ ವೃಂದ, ಸಿಬ್ಬಂದಿ ವರ್ಗ, ವಿದ್ಯಾರ್ಥಿ ಗಳು ಇದ್ದರು.
ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯ ನಾಗರಾಜ್ ಸ್ವಾಗತಿಸಿ, ಕಛೇರಿ ಅಧೀಕ್ಷಕರಾದ ಚಂದ್ರಮತಿ ವಂದಿಸಿದರು.