ಮಡಿಕೇರಿ, ಜು. ೪ : ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜಿಲ್ಲೆಯವರಾದ ಚಾಮೆರ ದೇವಯ್ಯ (ಚಂದನ್) ಇದೀಗ ಮೇಜರ್ ಆಗಿ ಬಡ್ತಿ ಹೊಂದಿದ್ದಾರೆ. ಇವರು ಮೂಲತಃ ಮಂಕ್ಯದವರಾಗಿದ್ದು ಇವರು ಶನಿವಾರಸಂತೆಯಲ್ಲಿ ನೆಲೆಸಿದ್ದ, ಇದೀಗ ಬೆಂಗಳೂರಿನಲ್ಲಿರುವ ಚಾಮೆರ ಪ್ರಕಾಶ್ ಹಾಗೂ ಉಷಾ ದಂಪತಿ ಪುತ್ರ.