ಮಡಿಕೇರಿ, ಜು. ೪: ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಾಪೋಕ್ಲು ಠಾಣಾ ವ್ಯಾಪ್ತಿಯ ಕೊಟ್ಟಮುಡಿ ಜಂಕ್ಷನ್ ಬಸ್ ನಿಲ್ದಾಣದ ಬಳಿ ಅಕ್ರಮವಾಗಿ ಗಾಂಜಾ ಹಾಗೂ ಎಂಡಿಎAಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವೇಳೆ ಧಾಳಿ ನಡೆಸಿದ ಪೊಲೀಸರು ಮಡಿಕೇರಿ ನಿವಾಸಿಗಳಾದ ಮೊಹಮ್ಮದ್ ಹ್ಯಾರಿಸ್ (೪೦) ಹಾಗೂ ಹ್ಯಾರಿಸ್ (೩೭) ಎಂಬವರುಗಳನ್ನು ಬಂಧಿಸಿ ೨೨೫ ಗ್ರಾಂ ಗಾಂಜಾ ಹಾಗೂ ೪ ಗ್ರಾಂ ಎಂಡಿಎAಎ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.
ಎಸ್ಪಿ ಕೆ. ರಾಮರಾಜನ್ ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ಡಿವೈಎಸ್ಪಿ ಎಂ. ಜಗದೀಶ್, ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ನಾಪೋಕ್ಲು ಠಾಣಾಧಿಕಾರಿ ಈ. ಮಂಜುನಾಥ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಮತ್ತೊಂದು ಪ್ರಕರಣದಲ್ಲಿ ತಾ. ೧ರಂದು ವೀರಾಜ ಪೇಟೆ ವ್ಯಾಪ್ತಿಯ ನಲ್ವತ್ತೋಕ್ಲು ಗ್ರಾಮದ ಕ್ಲಸ್ಟರ್ ಹೋಂಸ್ಟೇನಲ್ಲಿ ಗಾಂಜಾ ಗಿಡ ಗಳನ್ನು ಬೆಳೆಸಿದ್ದ ಆರೋಪಿ ನಲ್ವತ್ತೋಕ್ಲುವಿನ ಅಕ್ಷಯ್ (೨೮) ಎಂಬಾತನನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.