ಪೊನ್ನಂಪೇಟೆ, ಜು.೩: ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬೆಕ್ಕೆಸೊಡ್ಲೂರು ಗ್ರಾಮದಲ್ಲಿ ಭಾನುವಾರ ರಾತ್ರಿ ವೃದ್ಧೆಯೊಬ್ಬರು ವಾಸವಾಗಿದ್ದ ಮನೆ ಮತ್ತು ರಾಷ್ಟೀಕೃತ ಬ್ಯಾಂಕ್‌ವೊAದರಲ್ಲಿ ಕಳ್ಳನೊಬ್ಬ ಕಳ್ಳತನಕ್ಕೆ ಯತ್ನ ನಡೆಸಿದ್ದು, ಮನೆಯೊಡತಿಯ ಸಮಯಪ್ರಜ್ಞೆಯಿಂದ ಕಳ್ಳತನ ಯತ್ನ ವಿಫಲವಾಗಿರುವ ಘಟನೆ ನಡೆದಿದೆ.

ಬೆಕ್ಕೆಸೊಡ್ಲೂರು ಗ್ರಾಮದ ಸುಳ್ಳಿಮಾಡ ತಮ್ಮಯ್ಯ ಹಾಗೂ ಭೀಮಯ್ಯ ಎಂಬ ಸಹೋದರರಿಗೆ ಸೇರಿದ ಮನೆಯಲ್ಲಿ ಎಸ್.ಗಂಗಮ್ಮ ಎಂಬವರು ವಾಸವಾಗಿದ್ದು, ಇವರ ಇಬ್ಬರು ಪುತ್ರರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಏಕಾಂಗಿಯಾಗಿದ್ದ ಗಂಗಮ್ಮ ಅವರ ಮನೆಗೆ ಭಾನುವಾರ ರಾತ್ರಿ ೧೧ ಗಂಟೆಯ ಸಮಯದಲ್ಲಿ ಕಳ್ಳನೊಬ್ಬ ಬಂದಿದ್ದು, ಮನೆಯ ಕರೆಗಂಟೆ ಒತ್ತಿದ್ದಾನೆ. ರಾತ್ರಿಯಾದ ಕಾರಣ ಗಂಗಮ್ಮ ಅವರು ಬಾಗಿಲು ತೆರೆಯಲು ಮುಂದಾಗಲಿಲ್ಲ. ಆದ್ದರಿಂದ ಕಳ್ಳ ಮುಂಬಾಗಿಲನ್ನು ಹಾರೆಯಿಂದ ಮೀಟಿ ತೆರೆಯಲು ಪ್ರಯತ್ನಿಸಿದ್ದಾನೆ. ಮುಂಭಾಗಿಲು ತೆರೆಯದ ಕಾರಣ ಹಿಂಬದಿಯ ಬಾಗಿಲನ್ನು ಮುರಿಯುವ ಪ್ರಯತ್ನ ನಡೆಸಿದ್ದಾನೆ. ಈ ಸಂದರ್ಭ ಎಚ್ಚೆತ್ತುಕೊಂಡ ಗಂಗಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿದ್ದ ತಮ್ಮ ಮಗಳು ಮತ್ತು ಅಳಿಯನಿಗೆ ಮೊಬೈಲ್ ಮೂಲಕ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅವರು ಪೊನ್ನಂಪೇಟೆ, ಜು.೩: ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬೆಕ್ಕೆಸೊಡ್ಲೂರು ಗ್ರಾಮದಲ್ಲಿ ಭಾನುವಾರ ರಾತ್ರಿ ವೃದ್ಧೆಯೊಬ್ಬರು ವಾಸವಾಗಿದ್ದ ಮನೆ ಮತ್ತು ರಾಷ್ಟೀಕೃತ ಬ್ಯಾಂಕ್‌ವೊAದರಲ್ಲಿ ಕಳ್ಳನೊಬ್ಬ ಕಳ್ಳತನಕ್ಕೆ ಯತ್ನ ನಡೆಸಿದ್ದು, ಮನೆಯೊಡತಿಯ ಸಮಯಪ್ರಜ್ಞೆಯಿಂದ ಕಳ್ಳತನ ಯತ್ನ ವಿಫಲವಾಗಿರುವ ಘಟನೆ ನಡೆದಿದೆ.

ಬೆಕ್ಕೆಸೊಡ್ಲೂರು ಗ್ರಾಮದ ಸುಳ್ಳಿಮಾಡ ತಮ್ಮಯ್ಯ ಹಾಗೂ ಭೀಮಯ್ಯ ಎಂಬ ಸಹೋದರರಿಗೆ ಸೇರಿದ ಮನೆಯಲ್ಲಿ ಎಸ್.ಗಂಗಮ್ಮ ಎಂಬವರು ವಾಸವಾಗಿದ್ದು, ಇವರ ಇಬ್ಬರು ಪುತ್ರರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಏಕಾಂಗಿಯಾಗಿದ್ದ ಗಂಗಮ್ಮ ಅವರ ಮನೆಗೆ ಭಾನುವಾರ ರಾತ್ರಿ ೧೧ ಗಂಟೆಯ ಸಮಯದಲ್ಲಿ ಕಳ್ಳನೊಬ್ಬ ಬಂದಿದ್ದು, ಮನೆಯ ಕರೆಗಂಟೆ ಒತ್ತಿದ್ದಾನೆ. ರಾತ್ರಿಯಾದ ಕಾರಣ ಗಂಗಮ್ಮ ಅವರು ಬಾಗಿಲು ತೆರೆಯಲು ಮುಂದಾಗಲಿಲ್ಲ. ಆದ್ದರಿಂದ ಕಳ್ಳ ಮುಂಬಾಗಿಲನ್ನು ಹಾರೆಯಿಂದ ಮೀಟಿ ತೆರೆಯಲು ಪ್ರಯತ್ನಿಸಿದ್ದಾನೆ. ಮುಂಭಾಗಿಲು ತೆರೆಯದ ಕಾರಣ ಹಿಂಬದಿಯ ಬಾಗಿಲನ್ನು ಮುರಿಯುವ ಪ್ರಯತ್ನ ನಡೆಸಿದ್ದಾನೆ. ಈ ಸಂದರ್ಭ ಎಚ್ಚೆತ್ತುಕೊಂಡ ಗಂಗಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿದ್ದ ತಮ್ಮ ಮಗಳು ಮತ್ತು ಅಳಿಯನಿಗೆ ಮೊಬೈಲ್ ಮೂಲಕ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅವರು (ಮೊದಲ ಪುಟದಿಂದ) ಮೊದಲೇ ಅದರ ಸಿ.ಸಿ. ಕ್ಯಾಮರಗಳನ್ನು ಕಳ್ಳ ಹಾಳುಗೆಡವಿರುವುದು ಕಂಡು ಬಂದಿದೆ. ಅಲ್ಲದೆ ಬ್ಯಾಂಕ್‌ನ ಹಿಂಬದಿಯ ಕಿಟಕಿಯನ್ನು ಹೊಡೆದು ಹಾಕಿದ್ದು, ಆವರಣದಲ್ಲಿದ್ದ ೪ ಸಿ.ಸಿ. ಕ್ಯಾಮರಾಗಳ ಪೈಕಿ ೩ ಕ್ಯಾಮರಗಳನ್ನು ಕಳ್ಳ ಹೊತ್ತೊಯ್ದಿದ್ದಾನೆ. ಮತ್ತೊಂದು ಕ್ಯಾಮರಾದಲ್ಲಿ ಕಳ್ಳನ ೨ ಸೆಕೆಂಡ್‌ಗಳ ವೀಡಿಯೋ ಸೆರೆಯಾಗಿದ್ದು, ಸಿಸಿ ಕ್ಯಾಮರ ದೃಶ್ಯಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಕಳ್ಳತನ ಯತ್ನ ನಡೆದ ಸ್ಥಳಕ್ಕೆ ಜಿಲ್ಲಾ ಶ್ವಾನದಳ ಮತ್ತು ಪೊನ್ನಂಪೇಟೆ ಪೊಲೀಸರು ಆಗಮಿಸಿ ಮಹಜರು ನಡೆಸಿದ್ದಾರೆ. ಬ್ಯಾಂಕ್ ಆವರಣವನ್ನು ಪರಿಶೀಲನೆ ನಡೆಸಿದ ಸಂದರ್ಭ ಸಮೀಪದಲ್ಲೇ ಕೆಂಪು ಬಣ್ಣದ ಬ್ಯಾಗೊಂದು ದೊರೆತಿದ್ದು, ಪೊಲೀಸರು ಅದನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಬಗ್ಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.