'ವೀರಾಜಪೇಟೆ, ಜು. ೩: ಕೂರ್ಗ್ ಕ್ರಿಕೆಟ್ ಫೌಂಡೇಶನ್ ವತಿಯಿಂದ ಮುಂದಿನ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಐ.ಪಿ.ಎಲ್ ಮಾದರಿಯಲ್ಲಿ ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್ ಲೆದರ್ ಬಾಲ್ ಪಂದ್ಯಾಟವನ್ನು ನಡೆಸಲಾಗುವುದು ಎಂದು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕೂರ್ಗ್ ಕ್ರಿಕೆಟ್ ಫೌಂಡೇಶನ್‌ನ ಸಂಯೋಜಕ ಪೊರಕೊಂಡ ಸುನಿಲ್ ತಿಳಿಸಿದರು.
ವೀರಾಜಪೇಟೆಯ ಪ್ರೆಸ್‌ಕ್ಲಬ್‌ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟಗಳು ನಡೆಯುತ್ತಿದ್ದು ಅದು ಕೇವಲ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಲೆದರ್‌ಬಾಲ್ ಕ್ರಿಕೆಟ್‌ನಲ್ಲಿ
(ಮೊದಲ ಪುಟದಿಂದ) ಮಕ್ಕಳಿಗೆ ಉತ್ತಮ ಭವಿಷ್ಯ ಇರುವ ಕಾರಣ ಐ.ಪಿ.ಎಲ್. ಮಾದರಿಯ ಕೊಡವ ಪ್ರೀಮಿಯರ್ ಕ್ರಿಕೆಟ್ ಲೀಗ್ ಪಂದ್ಯಾಟವನ್ನು ನಡೆಸಲಾಗುವುದು. ಕೊಡವ ಜನಾಂಗದವರಿಗೆ ಮಾತ್ರ ಸೀಮಿತವಾಗಿರುವ ಈ ಪಂದ್ಯಾಟದಲ್ಲಿ ೧೦ ಪ್ರಾಂಚೈಸಿಗಳಿಗೆ ಅವಕಾಶ ನೀಡಲಾಗುವುದು. ಈಗಾಗಲೇ ಹಲವು ಪ್ರಾಂಚೈಸಿಗಳು ಸಂಪರ್ಕದಲ್ಲಿದ್ದು ಶೀಘ್ರವಾಗಿಯೇ ಹರಾಜು ಪ್ರಕ್ರಿಯೆ ನಡೆಸಲಾಗುವುದು. ಪಂದ್ಯಾಟವನ್ನು ಮಡಿಕೇರಿ ಅಥವಾ ವೀರಾಜಪೇಟೆಯಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ವಯೋಮಿತಿಯ ನಿಬಂಧನೆಗಳಿರುವುದಿಲ್ಲ. ಈ ಸಾಲಿನ ಪಂದ್ಯಾಟದಲ್ಲಿ ಕೊಡವ ಪ್ರಾಂಚೈಸಿಗಳಿಗೆ ಮೊದಲ ಆದ್ಯತೆ ನೀಡಿ ಮುಂದಿನ ಸಾಲಿನಿಂದ ಎಲ್ಲಾ ಜನಾಂಗ ಪ್ರಾಂಚೈಸಿಗಳನ್ನು ಸೇರಿಸಿ ಪಂದ್ಯಾಟ ಆಯೋಜಿಸುವ ಗುರಿ ಹೊಂದಲಾಗಿದೆ.
ಚೇರಂಡ ಕಿಶನ್‌ಮಾದಪ್ಪ ಅವರ ಮಾರ್ಗದರ್ಶನದಲ್ಲಿ ಹದಿನೈದು ದಿನಗಳ ಕಾಲ ನಡೆಯುವ ಈ ಪಂದ್ಯಾಟದಲ್ಲಿ ನುರಿತ ಹಾಗೂ ವೃತ್ತಿಪರ ತೀರ್ಪುಗಾರರನ್ನು ನಿಯೋಜಿಸಲಾಗುವುದು ಹೆಚ್ಚಿನ ಮಾಹಿತಿಗೆ ಪೊರುಕೊಂಡ ಸುನಿಲ್ ೯೬೮೬೧೦೭೨೯೭, ಚಂಡಿರ ರಚನ್ ಚಿಣ್ಣಪ್ಪ ೯೬೧೧೦೮೧೦೬೭ ಈ ದೂರವಾಣಿ ಸಂಖ್ಯೆಗಳನ್ನು ಸಂರ್ಪಕಿಸಬಹುದಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಸಂಸ್ಥೆಯ ಸಹ ಸಂಯೋಜಕ ಚಂಡಿರ ರಚನ್‌ಚಿಣ್ಣಪ್ಪ ಸದಸ್ಯರಾದ ಬಲ್ಲಂಡ ರೇಣು ಮಡ್ಲಂಡ ದರ್ಶನ್ ಅಜ್ಜಿನಂಡ ಯತಾರ್ಥ ಚೆರುಮಂದAಡ ಸೋಮಣ್ಣ ಉಪಸ್ಥಿತರಿದ್ದರು.