ಗೋಣಿಕೊಪ್ಪಲು, ಜು. ೩: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಧಿಕಾರ ಇರುವುದರಿಂದ ಜನರ ಸೇವೆಗೆ ವಿಫಲ ಅವಕಾಶವಿದೆ. ಸರ್ಕಾರಗಳು ಕೂಡ ಹೆಚ್ಚಿನ ಅನುದಾನವನ್ನು ಗ್ರಾಮ ಪಂಚಾ ಯಿತಿಗೆ ನೀಡುತ್ತ ಬಂದಿದೆ. ಇದರಿಂದ ಸ್ಥಳೀಯ ಜನರ ಕಷ್ಟಗಳಿಗೆ ಕೂಡಲೇ ಸ್ಪಂದಿಸಬೇಕು. ಇದರಿಂದ ಪಂಚಾಯಿತಿ ಅಧ್ಯಕ್ಷರ ಹಾಗೂ ಸದಸ್ಯರ ಜವಾಬ್ದಾರಿ ಹೆಚ್ಚಾ ಗಲಿದೆ. ಉತ್ತಮ ಕೆಲಸ ನಿರ್ವಹಿಸಿದ ತೃಪ್ತಿಯು ದೊರೆಯಲಿದೆ ಎಂದು ವೀರಾ ಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ರಾದ ಎ.ಎಸ್.ಪೊನ್ನಣ್ಣ ಹೇಳಿದರು.
ದ.ಕೊಡಗಿನ ಟಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿಯಲ್ಲಿದ್ದ ನೂತನ ಸಭಾಂಗಣವನ್ನು ಉದ್ಘಾಟಿಸಿ ಮಾತ ನಾಡಿದ ಇವರು ಪಂಚಾಯಿತಿಯ ಅಭಿ ವೃದ್ಧಿ ವಿಷಯದಲ್ಲಿ ನನ್ನನ್ನು ನೇರ ವಾಗಿ ಭೇಟಿ ಮಾಡಬಹುದು. ಸರ್ಕಾ ರದ ವತಿಯಿಂದ ಆಗುವ ಕೆಲಸಗ ಳನ್ನು ಆದ್ಯತೆ ಮೇರೆಗೆ ಮಾಡುತ್ತೇನೆ. ಪಂಚಾಯಿತಿಯಲ್ಲಿ ಎಂದಿಗೂ ರಾಜ ಕೀಯ ನುಸುಳ ಬಾರದು, ಪಕ್ಷಾ ತೀತವಾಗಿ ಆರಿಸಿ ಬಂದ ಸದಸ್ಯರು ತಮ್ಮ ಗ್ರಾಮಗಳಿಗೆ ಉತ್ತಮ ರೀತಿಯ ಸೌಕರ್ಯಗಳನ್ನು ಒದಗಿಸಬೇಕು. ಪಂಚಾಯಿತಿ ಆಡಳಿತ ಮಂಡಳಿ ಒಟ್ಟಾಭಿಪ್ರಾಯ ಮಂಡಿಸಿ ಅಭಿವೃದ್ಧಿ ಯತ್ತ ಚಿಂತನೆ ನಡೆಸಬೇಕು. ವಿಶೇಷ ವಾಗಿ ಬಡವರಿಗೆ ಶೋಷಿತರಿಗೆ ಧ್ವನಿಯಾಗಿ ಕೆಲಸ ನಿರ್ವಹಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಗಳಾಗಿ ಭಾಗವಹಿಸಿ ಮಾತನಾಡಿದ ವಿಧಾನಪರಿಷತ್‌ನ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ, ಟಿ.ಶೆಟ್ಟಿಗೇರಿ ಪಂಚಾಯಿತಿ ಕಟ್ಟಡಕ್ಕೆ ಸ್ಥಳೀಯ ದಾನಿಗಳು ನೀಡಿದ ನಿವೇ ಶನ ಲಕ್ಷಾಂತರ ಬೆಲೆ ಬಾಳುತ್ತದೆ. ಆದರೂ ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ದಾನಿಗಳು ತಮ್ಮ ಜಾಗವನ್ನು ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ನೀಡಿರುವುದು ಶ್ಲಾಘನೀಯ. ಇದರಿಂದ ಪಂಚಾಯಿತಿ ಅಭಿವೃದ್ಧಿ ಮುಂದೆ ಸಾಗುತ್ತಿದೆ. ಗ್ರಾಮ ಮಟ್ಟದಲ್ಲಿ ಅಭಿವೃದ್ಧಿ ಆದಲ್ಲಿ ದೇಶ ಅಭಿವೃದ್ಧಿ ಆಗಲಿದೆ. ಕೇಂದ್ರ ಸರ್ಕಾರ ದಿಂದ ಸಾಕಷ್ಟು ಅನುದಾನ ಪಂಚಾ ಯಿತಿಗೆ ಬರುತ್ತಿದೆ. ಪಂಚಾಯಿತಿ ಸದಸ್ಯರ ಮಾಸಿಕ ಭತ್ಯೆಯನ್ನು ಹೆಚ್ಚು ಮಾಡಲಾಗಿದೆ. ಈ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಧ್ವನಿ ಎತ್ತಿದ್ದೇನೆ.
ನನ್ನೊಂದಿಗೆ ಎಲ್ಲಾ ಸದಸ್ಯರು ಧ್ವನಿ ಗೂಡಿಸಿದ್ದರು. ಇದರಿಂದ ರಾಜ್ಯದ ಎಲ್ಲಾ ಪಂಚಾಯಿತಿ ಸದಸ್ಯರಿಗೂ ಮಾಸಿಕ ಭತ್ಯೆ ಹೆಚ್ಚಾಗಲು ಕಾರಣವಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರಿಗೆ ಗ್ರಾಮದ ಜನರ ಒಡನಾಟವಿರುವುದರಿಂದ ಇವರ ಬೇಕು ಬೇಡಿಕೆಗಳನ್ನು ಈಡೇರಿಸಲು ಅವಕಾಶ ಲಭಿಸಿದೆ. ಉತ್ತಮ ರೀತಿಯ ಕೆಲಸ ನಿರ್ವಹಿಸಿ ಜನರ ಮನಸ್ಸನ್ನು ಗೆಲ್ಲುವಂತೆ ಸದಸ್ಯರಿಗೆ ಕರೆ ನೀಡಿದರು.
ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಮಚ್ಚಮಾಡ ಎನ್. ಸುಮಂತ್ ಪ್ರಾಸ್ತವಿಕವಾಗಿ ಮಾತನಾಡಿದರು.
ದಾನಿಗಳಾದ ಅಪ್ಪಚಂಗಡ ಮೋಟಯ್ಯ ಮಾತನಾಡಿ ಗ್ರಾಮದಲ್ಲಿ ಉತ್ತಮ ಪಂಚಾಯಿತಿ ಕಟ್ಟಡ ನಿರ್ಮಾಣದ ಹಿನ್ನೆಲೆಯಲ್ಲಿ ಸಹೋದರರ ಒಟ್ಟಾಭಿಪ್ರಾಯದಂತೆ ನಿವೇಶನವನ್ನು ನೀಡಲಾಗಿದೆ. ಇದರಿಂದ ಗ್ರಾಮಕ್ಕೆ ಉತ್ತಮ ಹೆಸರು ಬಂದಿದೆ. ಬಡ ಜನರ ಕಷ್ಟಗಳಿಗೆ ಪಂಚಾಯಿತಿ ಸದಸ್ಯರು ಕೂಡಲೇ ಸ್ಪಂದನ ನೀಡಬೇಕು. ಅವರ ಆಶೋತ್ತರಗಳನ್ನು ಈಡೇರಿಸಬೇಕು ಎಂದರು.
ಗ್ರಾ.ಪA. ಅಧ್ಯಕ್ಷರಾದ ಚೊಟ್ಟೆ ಯಂಡ zಮಾಡ ಟಿ.ಸರಿತ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭ ದಲ್ಲಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿಯಾದ ಕೆ.ಸಿ.ಅಪ್ಪಣ್ಣ, ಪಂಚಾಯಿತಿ ಉಪಾಧ್ಯಕ್ಷ ಹೆಚ್.ಕೆ.ರಾಮ, ಸದಸ್ಯರುಗಳಾದ ಚೊಟ್ಟೆ ಯಂಡ ಮಾಡ ಜೆ.ವಿಶುರಂಜಿ, ಕುಂಞAಗಡ ಬಿ.ಕೃಷ್ಣ, ಮನ್ನೆರ ಎಸ್.ಅಜಿತ್, ಕೆ.ಪಿ.ಪ್ರಭು, ಕಟ್ಟೆರ ಗ್ರೇಸಿ ದೇವಮ್ಮಾಜಿ, ಮಚ್ಚಮಾಡ ಹೇಮಾವತಿ, ಸಮರಡ ವನಿತ, ಎಂ.ಎA.ಪಟ್ಟು, ಪೆಚ್ಚಿಯ ಮ್ಮಾಲ್, ವೈ.ಎಂ.ಬೊಳಕ, ಪಣಿಯರ ಬೋಜ, ಪಣಿಯರ ಚಣ್ಣೆ, ಪಣಿಯರ ದೇವಿ, ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಎಂ.ಎಲ್.ಕವಿತ ಸ್ವಾಗತಿಸಿ ಬಿ.ಆರ್.ಧನು. ನಿರೂಪಿಸಿ ಟಿ.ಟಿ. ಸರಿತ ವಂದಿಸಿದರು.