ಶ್ರೀಮಂಗಲ, ಜು. ೩: ಕಳೆದ ಒಂದೆರಡು ದಶ ಕಗಳಿಂದ ವಿಪರೀತ ವಾಗಿರುವ ವಾಣಿಜ್ಯ ಉದ್ದೇಶಕ್ಕೆ ಭೂ ಪರಿವ ರ್ತನೆ ಮತ್ತು ನಗರೀಕರಣ ವಿಸ್ತರಣೆ, ಲೇಔಟ್ ನಿರ್ಮಾಣದಿಂದ ಕೊಡಗಿನ ಅಸ್ತಿತ್ವಕ್ಕೆ ದೊಡ್ಡ ಬೆದರಿಕೆ ಬಂದಿದೆ. ಇದರ ವಿರುದ್ಧ ಒಗ್ಗಟ್ಟಾಗಿ ವಿರೋಧಿಸ ಬೇಕಾದ ಅನಿವಾರ್ಯತೆ ಇದೆ ಎಂದು ಕೊಡಗು ಸಂರಕ್ಷಣಾ ವೇದಿ ಕೆಯ ಪ್ರಮುಖರು ಎಚ್ಚರಿಸಿದ್ದಾರೆ.

ಪೊನ್ನಂಪೇಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೊಡಗಿನಲ್ಲಿ ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಮತ್ತು ನಗರೀಕರಣ ಇದು ವಿಪರೀತವಾಗಿದ್ದು ನಾವು ಇದನ್ನು ನಿಲ್ಲಿಸದಿದ್ದರೆ ಕೊಡಗಿಗೆ ಭವಿಷ್ಯದಲ್ಲಿ ದೊಡ್ಡ ಬೆದರಿಕೆ ಉಂಟಾಗಲಿದೆ, ಕೊಡಗಿನ ಪರಿಸರ, ಸಂಸ್ಕೃತಿ, ಕೃಷಿ ನಾಶವಾಗುವ ಅಪಾಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ವೇದಿಕೆಯ ಅಧ್ಯಕ್ಷ ಚೊಟ್ಟೆಕ್‌ಮಾಡ ರಾಜೀವ್ ಬೋಪಯ್ಯ ಅವರು ಮಾತನಾಡಿ ದಕ್ಷಿಣ ಕೊಡಗಿನಲ್ಲಿ ವೀರಾಜಪೇಟೆ- ಗೋಣಿಕೊಪ್ಪ -ಪೊನ್ನಂಪೇಟೆ ಪಟ್ಟಣಗಳು ಬೆಳೆದು ಒಂzಕ್ಕೊAದು ಸೇರಿಕೊಂಡು ಮೈಸೂರು ನಗರ ಮಾದರಿ ಬೃಹತ್ ನಗರ ನಿರ್ಮಾಣವಾಗಲಿದೆ. ಉತ್ತರ ಕೊಡಗಿನಲ್ಲಿ ಅದೇ ಪ್ರಕಾರ ಕುಶಾಲನಗರ- ಸೋಮವಾರಪೇಟೆ-ಮಡಿಕೇರಿ ಒಂದಾಗಿ ಬೃಹತ್ ನಗರ ಬರುತ್ತದೆ. ಇಂತಹ ಸಂದರ್ಭದಲ್ಲಿ ಕಾವೇರಿ ನದಿಯಿಂದ ಮೈಸೂರು, ಮಂಡ್ಯ, ಬೆಂಗಳೂರು ಜನತೆಗೆ ಸೇರಿದಂತೆ ತಮಿಳುನಾಡಿಗೆ ಕುಡಿಯಲು ಹಾಗೂ ಕೃಷಿಗೆ ಕಾವೇರಿ ನೀರು ಕೊಡಲು ಸಾಧ್ಯವಾಗುವುದಿಲ್ಲ, ಕೊಡಗಿನಲ್ಲಿಯೇ ನೀರಿನ ಅಭಾವ ಉಂಟಾಗಬಹುದೆAದು ಅವರು ಕಳವಳ ವ್ಯಕ್ತಪಡಿಸಿದರು.

ವೇದಿಕೆ ಸಂಚಾಲಕ ನಿವೃತ್ತ ಕರ್ನಲ್ ಚೆಪ್ಪುಡೀರ ಪಿ.ಮುತ್ತಣ್ಣ ಅವರು ಮಾತನಾಡಿ ಕೊಡಗಿನಲ್ಲಿ ೨೦೧೮, ೨೦೧೯ ಮತ್ತು ೨೦೨೦ ರಲ್ಲಿ ಆದ ಪ್ರಾಕೃತಿಕ ವಿಕೋಪಕ್ಕೆ ಮಾನವ ನಿರ್ಮಿತ ಎಂದು ತಜ್ಞರ ವರದಿ ಹೇಳಿದೆ. ಜಿಲ್ಲೆಯಲ್ಲಿ ಮತ್ತೆ ಅತಿಯಾದ ವಾಣಿಜ್ಯ ಭೂಪರಿವರ್ತನೆಯಿಂದ ಮತ್ತೆ ಪ್ರಾಕೃತಿಕ ವಿಕೋಪದ ಅಪಾಯವನ್ನು ಆಹ್ವಾನಿಸು ತ್ತಿದ್ದೇವೆ. ನಿಯಮದಂತೆ ಕೊಡಗಿನಲ್ಲಿ ಕಾಫಿ ತೋಟ, ಬಾಣೆ ಹಾಗೂ ಭತ್ತದ ಗದ್ದೆ ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡು ವಂತಿಲ್ಲ ಆದರೂ ಭ್ರಷ್ಟಾ ಚಾರದ ಅತಿರೇಕದಿಂದ ಅಧಿಕಾರಿ ಗಳು ಅನುಮತಿ ನೀಡುತ್ತಿದ್ದಾರೆ ಈ ಹಿನ್ನೆಲೆ ಉಚ್ಚ ನ್ಯಾಯಾಲಯದಲ್ಲಿ ನಮಗೆ ಮಧ್ಯಂತರ ತಡೆಯಾಜ್ಞೆ ದೊರೆತಿದೆ ಎಂದು ಹೇಳಿದರು. ಉಚ್ಚ ನ್ಯಾಯಾ ಲಯದಲ್ಲಿ ದೊರೆತಿರುವ ಮಧ್ಯಂತರ ಆದೇಶದಲ್ಲಿ ಸ್ಪಷ್ಟವಾಗಿ ಜಿಲ್ಲಾಧಿಕಾರಿಗಳಿಗೆ ಕೊಡಗಿನಲ್ಲಿ ವಾಣಿಜ್ಯ ಭೂ ಪರಿವರ್ತನೆ ಮಾಡಲು ಯಾವುದೇ ಅಧಿಕಾರ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಈ ಹಿಂದಿನ ಜಿಲ್ಲಾಧಿಕಾರಿಗಳಿಗೆ ಸ್ಪಷ್ಟವಾಗಿ ಹಲವು ಸಲ ಈ ಬಗ್ಗೆ ತಿಳಿಸಿದ್ದೇವೆ. ಆದರೂ ಅವರು ಬಹಳಷ್ಟು ಭೂ ಪರಿವರ್ತನೆಗೆ ಅನುಮತಿ ನೀಡಿದ್ದಾರೆ. ಈ ಹಿನ್ನೆಲೆ ಈ ಹಿಂದಿನ ಜಿಲ್ಲಾಧಿಕಾರಿ ವಿರುದ್ಧ ಕ್ರಮಕ್ಕೆ ಸಿ.ಪಿ. ಮುತ್ತಣ್ಣ ಸರಕಾರವನ್ನು ಒತ್ತಾಯಿಸಿದರು.