ಗುಡ್ಡೆಹೊಸೂರು, ಜು. ೨: ಸುಂಟಿಕೊಪ್ಪ ನಾಡು ಗೌಡ ಸಮಾಜದ ವತಿಯಿಂದ ಗುಡ್ಡೆಹೊಸೂರಿನ ಶಾಂತನಾ ವಸತಿ ಗೃಹದಲ್ಲಿ ಶಾಸಕ ಡಾ. ಮಂಥರ್ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸುಂಟಿಕೊಪ್ಪ ನಾಡು ಗೌಡ ಸಮಾಜದ ಅಧ್ಯಕ್ಷ ಯಂಕನ ಉಲ್ಲಾಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ಜಿ.ಪಂ. ಮಾಜಿ ಸದಸ್ಯ ವಿ.ಪಿ ಶಶಿಧರ, ಗೌಡ ಸಮಾಜದ ಉಪಾಧ್ಯಕ್ಷ ಬಿಳಿಯಾರ್ ಜವಾಹರ್ ಉಪಸ್ಥಿತರಿದ್ದರು. ಕುಂಜಿಲನ ಮಂಜು ಪ್ರಾಸ್ತಾವಿಕ ನುಡಿಯಾಡಿದರು. ಸಮಾಜದ ಕಾರ್ಯದರ್ಶಿ ಯಂಕನ ಕೌಶಿಕ್ ನಿರೂಪಿಸಿದರು. ಸದಸ್ಯೆ ಯಂಕನ ಪ್ರಿಯಾಂಕ ಕೌಶಿಕ್ ಪ್ರಾರ್ಥಿಸಿ, ಕಡ್ಲೇರ ರತಿ ವಂದಿಸಿದರು.