ಸುAಟಿಕೊಪ್ಪ, ಜು. ೨: ಕುಶಾಲನಗರ ತಾಲೂಕು ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ತಾ. ೫ ರಂದು ಬೆಳಿಗ್ಗೆ ೧೧ ಗಂಟೆಯಿAದ ಮಧ್ಯಾಹ್ನ ೧ ಗಂಟೆಯವರೆಗೆ ಕೊಡಗರ ಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕೊಡಗರಹಳ್ಳಿ, ಅಂದಗೋವೆ ಗ್ರಾಮದ ರೈತರಿಗಾಗಿ ಪೌತಿ ಖಾತೆ ಆಂದೋಲನವನ್ನು ಏರ್ಪಡಿಸಲಾಗಿದೆ.
ಅಗತ್ಯ ದಾಖಲಾತಿಗಳಾದ ಆರ್.ಟಿ.ಸಿ. ವಂಶವೃಕ್ಷ, ಮರಣ ದೃಢೀಕರಣ ಪತ್ರ, ನೈಜ ದೃಢೀಕೃತ ದಾಖಲೆಗಳೊಂದಿಗೆ ಹಾಜರಾಗಿ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ನಾಡಕಛೇರಿ ಉಪತಹಶೀಲ್ದಾರ್ ಶಿವಪ್ಪ ತಿಳಿಸಿದ್ದಾರೆ.