ಚೆಟ್ಟಳ್ಳಿ, ಜು. ೨: ಸಮಾಜ-ಸಹಕಾರ ಕ್ಷೇತ್ರದ ಧುರೀಣ ಚೆಟ್ಟಳ್ಳಿಯ ಬಲ್ಲಾರಂಡ ಮಣಿ ಉತ್ತಪ್ಪ ಅವರಿಗೆ ನಾಗರಿಕ ಸನ್ಮಾನ ಸಮಿತಿಯ ವತಿಯಿಂದ ಚೆಟ್ಟಳ್ಳಿಯ ವಿಶ್ವಗುರು ನರೇಂದ್ರ ಮೋದಿ ಸಹಕಾರ ಭವನದಲ್ಲಿ ನಾಗರಿಕ ಸನ್ಮಾನ ಮಾಡಿ ಮಣಿ ಉತ್ತಪ್ಪ ಅವರ ಕುರಿತು ‘ಬವಣೆಯ ಬಲ್ಲ ಭಗೀರಥ ಬಲ್ಲಾರಂಡ ಮಣಿÂ ಉತ್ತಪ್ಪ’ ಎಂಬ ಪುಸ್ತಕ ಲೋಕಾರ್ಪಣೆ ಮಾಡ ಲಾಯಿತು.
ಮಣಿ ಉತ್ತಪ್ಪ ಬದುಕಿನ ಕುರಿತು ನಾಗರಿಕ ಸನ್ಮಾನ ಸಮಿತಿಯ ಅಧ್ಯಕ್ಷ ಕಣಜಾಲು ಪೂವಯ್ಯ ಬರೆದ ಪುಸ್ತಕವನ್ನು ಚೆಟ್ಟಳ್ಳಿ ಸಹಕಾರ ಸಂಘದ ಮಾಜಿ ವ್ಯವಸ್ಥಾಪಕ ಚಂಗುಲAಡ ಚಿಣ್ಣಪ್ಪ ಲೋಕಾರ್ಪಣೆಗೊಳಿಸಿದರು.
ಸಹಕಾರ ಸಂಘದ ಮಾಜಿ ಉಪಾಧ್ಯಕ್ಷ ಹೆಚ್.ಎಸ್. ತಿಮ್ಮಪ್ಪಯ್ಯ ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಮಾಜ ಸೇವೆ, ರಾಜಕೀಯ ಹಾಗೂ ಸಹಕಾರ ಕ್ಷೇತ್ರದಲ್ಲಿ ಸಾಧನೆಯನ್ನು ತೋರುವ ಮೂಲಕ ಸಾರ್ಥಕತೆಯನ್ನು ಮಣಿ ಉತ್ತಪ್ಪ ಮೆರೆದಿದ್ದಾರೆ. ಚೆಟ್ಟಳ್ಳಿ ಸಹಕಾರ ಸಂಘದ ಅಭಿವೃದ್ಧಿಯ ಜೊತೆಗೆ ಕನಸಿನ ಕೂಸಾದ ವಿಶ್ವಗುರು ನರೇಂದ್ರ ಮೋದಿ ಸಹಕಾರ ಭವನವನ್ನು ನಿರ್ಮಿಸಲು ಶ್ರಮಿಸಿ ಚೆಟ್ಟಳ್ಳಿ-ಈರಳೆ ಗ್ರಾಮದಲ್ಲಿ ದೈವಿಕ ನೆಲೆಗೆ ಕಾರಣಕರ್ತರಾಗಿದ್ದಾರೆ ಎಂದು ಶ್ಲಾಘಿಸಿದರು.
ಬಲ್ಲಾರಂಡ ಮಣಿ ಉತ್ತಪ್ಪ ಹಾಗೂ ಪತ್ನಿ ಗಂಗಮ್ಮ ಅವರನ್ನು ನಾಗರಿಕ ಸನ್ಮಾನ ಸಮಿತಿ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಚೇರಳ ಗೌಡ ಸಮಾಜ, ಚೆಟ್ಟಳ್ಳಿ ಸಹಕಾರ ಸಂಘದ ಪದಾಧಿಕಾರಿಗಳು, ಸಿಬ್ಬಂದಿಗಳು ಸಂಘದ ಸದಸ್ಯರು ನೆನಪಿನ ಕಾಣಿಕೆ ನೀಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಲ್ಲಾರಂಡ ಮಣಿ ಉತ್ತಪ್ಪ, ಬದುಕಿನಲ್ಲಿ ಹಲವು ಕಷ್ಟಸುಖಗಳ ನಡುವೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡ ಪರಿಣಾಮ ಇಂದು ನನ್ನನ್ನು ಗುರುತಿಸಿ ಸನ್ಮಾನಿಸಲಾಗಿದೆ. ೧೯೮೦ರಲ್ಲಿ ಜಿ.ಎಲ್. ನಾಗರಾಜ್ ನೇತೃತ್ವದಲ್ಲಿ ಚೆಟ್ಟಳ್ಳಿಯಲ್ಲಿ ರಾಷ್ಟಿçÃಯ ಸ್ವಯಂಸೇವಕ ಸಂಘವನ್ನು ಪ್ರಾರಂಭಿಸಿ ಸ್ವಯಂಸೇವಕರಾಗಿ ಕಲಿತ ಶಿಸ್ತು, ಸಂಯಮವನ್ನು ಬದುಕಿನಲ್ಲಿ ರೂಢಿಸಿಕೊಂಡ ಫಲವಾಗಿ ಸಮಾಜ ತನ್ನನ್ನು ಗುರುತಿಸುವಂತಾಯಿತು. ಜೊತೆಗೆ ನನ್ನ ಕುಟುಂಬದವರು ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದು ನನಗೆ ಹೆಮ್ಮೆ ಇದೆ. ನನ್ನ ಮರಣದ ನಂತರ ನನ್ನ ದೇಹವು ಸಮಾಜಕ್ಕೆ ಮುಡಿಪು ಎಂದರು.
೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಮಣಿ ಉತ್ತಪ್ಪ ಅವರ ಏಳಿಗೆಗೆ ಕಾರಣ ಕರ್ತರಾದ ರಾಷ್ಟಿçÃಯ ಸ್ವಯಂಸೇವಕ ಜೆ.ಎಲ್ ನಾಗರಾಜ್, ಸಂಘದ ಮಾಜಿ ಉಪಾಧ್ಯಕ್ಷ ಹೆಚ್.ಎಸ್. ತಿಮ್ಮಪ್ಪಯ್ಯ, ಮಾಜಿ ವ್ಯವಸ್ಥಾಪಕ ಚಂಗುಲAಡ ಚಿಣ್ಣಪ್ಪ, ಆಂತರಿಕ ಲೆಕ್ಕ ಪರಿಶೋಧಕ ಹೆಚ್.ಬಿ. ರಮೇಶ್, ಉಪಾಧ್ಯಕ್ಷ ಕಣಜಾಲು ಪೂವಯ್ಯ ಅವರನ್ನು ಇದೇ ಸಂದರ್ಭ ಮಣಿ ಉತ್ತಪ್ಪ ಅವರು ಸನ್ಮಾನಿಸಿ ಗೌರವಿಸಿದರು.
ಅತಿಥಿಗಳಾದ ರಾಷ್ಟಿçÃಯ ಸ್ವಯಂ ಸೇವಕ ಸಂಘದ ಹಿರಿಯ ಜೆ.ಎಲ್ ನಾಗರಾಜ್ ಮಾತನಾಡಿ, ಬದುಕಿನಲ್ಲಿ ಗೌರವ, ಅವಮಾನ ಸಾಮಾನ್ಯ. ನಡೆದವನು ಮಾತ್ರ ಎಡವಲು ಸಾಧ್ಯ. ಅದೇ ರೀತಿ ಬಲ್ಲಾರಂಡ ಮಣಿ ಉತ್ತಪ್ಪ ಸಮಾಜ ಸೇವೆಯ ಫಲವಾಗಿ ಇಂದು ನಾಗರಿಕ ಸನ್ಮಾನ ಸಮಿತಿಯ ಗೌರವಕ್ಕೆ ಭಾಜನರಾಗಿದ್ದಾರೆ ಎಂದರು.
ಸಹಕಾರ ಸಂಘದ ಮಾಜಿ ವ್ಯವಸ್ಥಾಪಕ ಚಂಗುಲAಡ ಚಿಣ್ಣಪ್ಪ, ವಾಯುಪಡೆಯ ನಿವೃತ್ತ ಅಧಿಕಾರಿ ಪುತ್ತರಿರ ಗಣೇಶ್ ಭೀಮಯ್ಯ, ಸ್ತಿçÃಶಕ್ತಿ ಹಾಗೂ ಮಹಿಳಾ ಒಕ್ಕೂಟದ ಮಾಜಿ ಅಧ್ಯಕ್ಷೆ ಮೇರಿ ಅಂಬುದಾಸ್, ಚೇರಳ ತಮ್ಮಂಡ ಸೋಮೇಶ್, ಬೊಪ್ಪಟ್ಟೀರ ಅಪ್ಪುಟ್ಟ ನಾಣಯ್ಯ, ಬಲ್ಲಾರಂಡಮಣಿ ಉತ್ತಪ್ಪನವರ ಸಾಮಾಜಿಕ ಸೇವಾ ಸಾಧನೆಯ ಬಗ್ಗೆ ವಿವರಿಸಿ ಮಣಿ ಉತ್ತಪ್ಪ ಅವರ ಸಹಕಾರ ಕ್ಷೇತ್ರದ ಅಭೂತಪೂರ್ವ ಸಾಧನೆಗೆ ಕಾರ್ಯ ಕ್ರಮದ ಅಂಗವಾಗಿ ಸಹಕಾರ ಪ್ರಶಸ್ತಿ ನೀಡಿ ಗೌರವಿಸಬೇಕೆಂದು ಒತ್ತಾಯಿಸಿದರು.
ನಾಗರಿಕ ಸನ್ಮಾನ ಸಮಿತಿ ಹಾಗೂ ಸಂಘದ ಉಪಾಧ್ಯಕ್ಷ ಕಣಜಾಲು ಪೂವಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರ್ ಕ್ಷಬ್‌ನ ಅಧ್ಯಕ್ಷೆ ಐಚೆಟ್ಟೀರ ಸುನಿತ ಮಾಚಯ್ಯ, ಚೇರಳ ಗೌಡ ಸಮಾಜದ ಸಲಹೆಗಾರ ಮೇಚನ ವಾಸು, ಈರಳೆ ಕ್ಲಬ್‌ನ ಅಧ್ಯಕ್ಷ ಚೋಳಪಂಡ ವಿಜಯ, ಬಲ್ಲಾರಂಡ ಕುಟುಂಬದ ಅಧ್ಯಕ್ಷ ಬಲ್ಲಾರಂಡ ಕವನ್ ತಿಮ್ಮಯ್ಯ ವೇದಿಕೆಯಲ್ಲಿದ್ದರು.
ಸಂಘದ ಮಾಜಿ ವ್ಯವಸ್ಥಾಪಕರು ಗಳಾದ ಪುತ್ತರಿರ ಸೀತಮ್ಮ ಮೊಣ್ಣಪ್ಪ, ಮುಳ್ಳಂಡ ಮಾಯಮ್ಮ ತಮ್ಮಯ್ಯ, ಪ್ರಾರ್ಥಿಸಿ ಪುತ್ತರಿರ ಸೀತಮ್ಮ ಸ್ವಾಗತಿಸಿ, ಸಂಘದ ಮಾಜಿ ಕಾರ್ಯನಿರ್ವ ಹಣಾಧಿಕಾರಿ ಹಾಗೂ ಆಂತರಿಕ ಲೆಕ್ಕ ಪರಿಶೋಧಕ ಹೆಚ್.ಬಿ. ರಮೇಶ್ ವಂದಿಸಿ ಸಂಘದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ನಂದಿಸಿ ಕೆ.ಎಸ್. ನಿರೂಪಿಸಿದರು.