ಸಿದ್ದಾಪುರ, ಜು. ೨: ಕಣ್ಣಂಗಾಲ ಹಾಗೂ ಬೈರಂಬಾಡ ಗ್ರಾಮಗಳ ಕಾಫಿ ತೋಟಗಳಿಂದ ಕಾಡಿಗಟ್ಟಿದ್ದ ಕಾಡಾನೆಗಳು ಮರಳಿ ಕಾಫಿ ತೋಟದೊಳಗೆ ಲಗ್ಗೆ ಇಟ್ಟು ದಾಂಧಲೆ ನಡೆಸುತ್ತಿವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಕಣ್ಣಂಗಾಲ ಹಾಗೂ ಬೈರಂಬಾಡ ಗ್ರಾಮಗಳ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಶನಿವಾರದಂದು ಅರಣ್ಯಕ್ಕಟ್ಟಿದ್ದರು. ಆದರೆ, ಕೆಲವು ಕಾಡಾನೆಗಳು ಕಾಫಿ ತೋಟದಲ್ಲಿ ಉಳಿದಿದ್ದವು, ಇದೀಗ ಅರಣ್ಯಕ್ಕಟ್ಟಲ್ಪಟ್ಟ ಕಾಡಾನೆಗಳು ಶನಿವಾರ ರಾತ್ರಿ ಹಿಂತಿರುಗಿ ಬಂದು ಕಾಫಿ ತೋಟದಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಾ ಕೃಷಿ ಪಸಲುಗಳನ್ನು ನಾಶಪಡಿಸುತ್ತಿದೆ ಎಂದು ಗ್ರಾಮಸ್ಥರು ಅಳಲು ವ್ಯಕ್ತಪಡಿಸಿದ್ದಾರೆ. ಕಣ್ಣಂಗಾಲ, ಬೈರಂಬಾಡ ಹಾಗೂ ಅಚ್ಚಿನಾಡು ಭಾಗದಲ್ಲಿ ಮರಿಯಾನೆಗಳು, ಸಲಗಗಳು ಸೇರಿದಂತೆ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ೨೫ಕ್ಕೂ ಅಧಿಕ ಕಾಡಾನೆಗಳು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಲಗ್ಗೆ ಇಡುತ್ತಾ ಸುತ್ತಾಡುತ್ತಿವೆ, ಇದರಿಂದಾಗಿ ಕಾಫಿ ತೋಟಗಳಲ್ಲಿ ಕಾರ್ಮಿಕರಿಗೆ ಹಗಲು ಕೆಲಸ ಮಾಡಲು ಸಾಧ್ಯವಾಗದಂತಹ ಸ್ಥಿತಿ ಎದುರಾಗಿದೆ. ಅಲ್ಲದೆ ಕಾಫಿ ತೋಟಗಳ ರಸ್ತೆ ಮೂಲಕ ತೆರಳುವ ಶಾಲಾ ಕಾಲೇಜು ಮಕ್ಕಳಿಗೆ ಭಯಮೂಡಿದೆ. ಆಹಾರ ಅರಸಿಕೊಂಡು ಕಾಡಾನೆಗಳು ಕಾಡಿನಿಂದ ನಾಡಿಗೆ ಬರುತ್ತಿದ್ದು, ಅರಣ್ಯ ಇಲಾಖಾಧಿಕಾರಿಗಳ ಶ್ರಮ ವ್ಯರ್ಥವಾಗುತ್ತಿರುವುದು ಕಂಡುಬAದಿದೆ. ಕಣ್ಣಂಗಾಲ ಹಾಗೂ ಬೈರಂಬಾಡ ಗ್ರಾಮಗಳು ಕಾಡಾನೆಗಳ ಆವಾಸ ಸ್ಥಾನವಾಗಿರುವ ಹಿನ್ನೆಲೆಯಲ್ಲಿ, ಕಾಡಾನೆಗಳ ಹಾವಳಿತಡೆಗಟ್ಟಲು ಸರ್ಕಾರ ಶಾಶ್ವತ ಯೋಜನೆ ರೂಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. -ವಾಸು