ಭಾಗಮAಡಲ, ಜು. ೨ : ಭಾಗಮಂಡಲದಲ್ಲಿ ಕಳೆದ ನಾಲ್ಕೂವರೆ ವರ್ಷಗಳÀ ಹಿಂದೆ ಆರಂಭಗೊAಡ ಮೇಲ್ಸೇತುವೆ ಈ ವರ್ಷದ ಮಳೆಗಾಲದಲ್ಲಿಯೂ ಜನರಿಗೆ ಸಂಚಾರಕ್ಕೆ ಲಭ್ಯ ಇಲ್ಲದಂತಾಗಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಬೀಳುವ ಹಾಗೂ ಪುಣ್ಯಕ್ಷೇತ್ರವಾದ ಭಾಗಮಂಡಲಕ್ಕೆ ಪ್ರತಿ ವರ್ಷ ಮಳೆಗಾಲದಲ್ಲಿ ಎರಡರಿಂದ ಮೂರು ತಿಂಗಳ ಕಾಲ ನಿರಂತರ ಸಂಪರ್ಕ ಕಡಿತಗೊಂಡು ಸಮಸ್ಯೆ ಎದುರಿಸುತ್ತಿದ್ದ ಹಿನ್ನೆಲೆಯಲ್ಲಿ ೨೦೧೯ರಲ್ಲಿ ಭಾಗಮಂಡಲದಲ್ಲಿ ಮೇಲ್ಸೇತುವೆ ಕಾಮಗಾರಿ ಆರಂಭಿಸಲಾಯಿತು. ವರ್ಷ ಮೂರು ಕಳೆದರೂ ಪಾದಚಾರಿಗಳ ಸಂಚಾರಕ್ಕೆ ಭಾಗ್ಯ ಇಲ್ಲದಂತಾಗಿದೆ.

ಪ್ರತಿವರ್ಷ ಮಳೆಗಾಲದಲ್ಲಿ ಬೋಟಿಂಗ್ ಹಾಗೂ ರ‍್ಯಾಫ್ಟಿಂಗ್ ಬಳಸಿಕೊಳ್ಳುತ್ತಿದ್ದ ಜನರು ಈ ವರ್ಷದಲ್ಲಿಯೂ ದೋಣಿ ಮತ್ತು ರಾಫ್ಟಿಂಗ್ ಬಳಸಬೇಕಾಗಿದೆ. ಕಾಮಗಾರಿ ೨೦೧೯ರಲ್ಲಿ ಆರಂಭ ಗೊಂಡ ಬಳಿಕ ಇದೀಗ ಶೇಕಡ ೯೦ರಷ್ಟು ಮುಕ್ತಾಯ ಕಂಡಿದೆ. ಆದರೆ ಮೂರು ಕಡೆಗಳಲ್ಲಿ ಇಳಿಯುವ ಮತ್ತು ಹತ್ತುವ ಭಾಗಕ್ಕೆ ಕಳೆದ ಏಳು ತಿಂಗಳ ಹಿಂದೆಯೇ ರೂ. ೪.೫೦ ಕೋಟಿ ಬಿಡುಗಡೆ ಗೊಂಡಿದ್ದು ಟೆಂಡರ್ ಪ್ರಕ್ರಿಯೆ ಆಗಿ ಕೆಲಸದ ವಿಳಂಬದಿAದಾಗಿ ಜನರಿಗೆ ಈ ವರ್ಷವೂ ಸಂಚರಿಸುವ ಸೌಲಭ್ಯ ಇಲ್ಲದಂತಾಗಿದೆ.

ಕಳೆದ ಒಂದು ತಿಂಗಳಿನಿAದ ನಾಪೋಕ್ಲು ಕಡೆ ಇಳಿಯುವ ಭಾಗದಲ್ಲಿ ಕೆಲಸ ಆರಂಭವಾಗಿ ಇದೀಗ ಮಳೆಯಿಂದಾಗಿ ಕೆಲಸ ನಿಲ್ಲಿಸಿದ್ದು ಈಚೆಗೆ ಉಸ್ತುವಾರಿ ಸಚಿವರು ಆಗಮಿಸಿದ ಸಂದರ್ಭ ಕೆ.ಡಿ.ಪಿ. ಸಭೆಯಲ್ಲಿ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ ಮರುದಿನವೇ ಕೆಲಸ ನಿಲ್ಲಿಸಿ ಕಾರ್ಮಿಕರು ಹಿಂತಿರುಗಿದ್ದು ಈ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಾಹನ ಸಂಚಾರಕ್ಕೆ ಅನುಕೂಲ ಇಲ್ಲದಿದ್ದರೂ ನಿತ್ಯ ಪಾದಚಾರಿಗಳು ನಡೆಯಲು ಅನುಕೂಲ ಕಲ್ಪಿಸಿಕೊಡು ವಂತೆ ಈ ಭಾಗದ ಜನತೆ ಒತ್ತಾಯಿಸಿದ್ದು ಈ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಇಲ್ಲದೇ ಹೋದಲ್ಲಿ ಅದೇ ದೋಣಿ ಅದೇ ರ‍್ಯಾಫ್ಟಿಂಗ್ ಈ ವರ್ಷದ ಮಳೆಗಾಲಕ್ಕೆ ಬಳಕೆ ಮಾಡಿ ಲಕ್ಷಗಟ್ಟಲೆ ಹಣ ವ್ಯಯ ಮಾಡಬೇಕಿದೆ. ಕೆಳಭಾಗದ ರಸ್ತೆಯಲ್ಲಿ ಸಂಪೂರ್ಣ ಕೆಸರುಮಯ ವಾಗಿದ್ದು ಸಂಚರಿಸಲು ಕಷ್ಟಕರ ವಾಗುತ್ತಿದೆ. ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಪಾದಚಾರಿಗಳಿಗೆ, ದ್ವಿಚಕ್ರ ವಾಹನ ಸವಾರರಿಗೆ ಸಮಸ್ಯೆಯಾಗಿ ಕಾಡುತ್ತಿದೆ. ಕೆಸರಿನಿಂದ ನಡೆಯಲೂ ಆಗದ ಪರಿಸ್ಥಿತಿ ಇದೆ. ಕೂಡಲೇ ಈ ಬಗ್ಗೆ ಗಮನಹರಿಸಬೇಕಿದೆ. ಕಾಮಗಾರಿ ಆರಂಭವಾದAದಿನಿAದ ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿದ್ದು ಕೆಲವು ಭಾಗದಲ್ಲಿ ರಸ್ತೆಗೆ ನೀರು ಬೀಳುತ್ತಿದ್ದು ವಾಹನ ಚಾಲಕರಿಗೆ ಕಷ್ಟಕರವಾಗುತ್ತಿದೆ. ಕಾಮಗಾರಿ ವಹಿಸಿಕೊಂಡ ಸಂಸ್ಥೆಯು ಕೇವಲ ಡಾಮರೀಕರಣ ಮಾತ್ರ ಬಾಕಿ ಉಳಿಸಿದ್ದು ಮೇಲ್ಭಾಗದ ಎರಡು ಕಡೆಗಳ ಹತ್ತುವ ಮತ್ತು ಇಳಿಯುವ ಪ್ರದೇಶದಲ್ಲಿ ರಸ್ತೆ ವ್ಯವಸ್ಥೆ ನಿರ್ಮಾಣವಾಗಬೇಕಿದೆ. ಉಳಿದ ಶೇಕಡ ಹತ್ತರಷ್ಟು ಕಾಮಗಾರಿ ಪೂರ್ಣಗೊಂಡಲ್ಲಿ ಮೇಲ್ಸೇತುವೆ ಜಿಲ್ಲೆಯ ಜನತೆಗೆ ಉಪಯೋಗಕ್ಕೆ ಲಭ್ಯವಾಗಲಿದೆ.

- ಕುಯ್ಯಮುಡಿ ಸುನಿಲ್