ಮಡಿಕೇರಿ, ಜು. ೨: ಗುಡ್ಡೆಹೊಸೂರಿನ ಐಶ್ವರ್ಯ ಪದವಿ ಪೂರ್ವ ಕಾಲೇಜಿನಲ್ಲಿ ೨೦೨೩-೨೪ರ ಶೈಕ್ಷಣಿಕ ಸಾಲಿನ ನೂತನ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಂದ ಸ್ವಾಗತ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಐಶ್ವರ್ಯ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ವ್ಯವಸ್ಥಾಪಕ ಪುಲಿಯಂಡ ರಾಮ್ ದೇವಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾಲೇಜಿನ ಪ್ರಾಂಶುಪಾಲರಾದ ಅಮ್ಮಾಟಂಡ ಜೋಯಪ್ಪ ವಿದ್ಯಾರ್ಥಿ ಗಳನ್ನು ಕುರಿತು ಮಾತನಾಡಿದರು. ವಿದ್ಯಾರ್ಥಿಗಳಾದ ಕೀರ್ತನಾ ಹಾಗೂ ರಾಬಿನ್ ಪೊನ್ನಣ್ಣ ಅನಿಸಿಕೆ ವ್ಯಕ್ತಪಡಿಸಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿ ಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮನರಂಜನಾತ್ಮಕ ಕ್ರೀಡೆ ಏರ್ಪಡಿಸಲಾಗಿತ್ತು. ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅದೃಷ್ಟಶಾಲಿ ವಿದ್ಯಾರ್ಥಿಯಾಗಿ ಪ್ರಥಮ ಪಿಯುಸಿ ವಿದ್ಯಾರ್ಥಿ ಕಿಶನ್ ಆಯ್ಕೆ ಯಾದರು. ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರಾದ ಮದನ್ ಹಾಗೂ ಎಲ್ಲಾ ಉಪನ್ಯಾಸಕ ವೃಂದದವರು ಹಾಜರಿದ್ದರು. ದೃತಿ ಹಾಗೂ ದಿವ್ಯಾ ನಿರೂಪಿಸಿ, ಸೋನಿಯಾ ಸ್ವಾಗತಿಸಿದರು. ವೈಷ್ಣವಿ ತಂಡ ಪ್ರಾರ್ಥಿಸಿ, ರಾಹುಲ್ ವಂದಿಸಿದರು.