ಸಿದ್ದಾಪುರ, ಜು. ೧: ಕಾಡಾನೆ ಕಾರ್ಯಾಚರಣೆ ಸಂದರ್ಭದಲ್ಲಿ ಮರವನ್ನು ಏರಿ ಕಾಡಾನೆಗಳ ಹಿಂಡು ಏಕಾಏಕಿ ಕಾಫಿ ತೋಟದೊಳಗೆ ನುಗ್ಗಿದ ಸಂದರ್ಭದಲ್ಲಿ ತೋಟದ ಕಾರ್ಮಿಕರು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾದ ಘಟನೆ ಕಣ್ಣಂಗಾಲ ಗ್ರಾಮದಲ್ಲಿ ನಡೆದಿದೆ.
ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಯ ಹಾಲುಗುಂದ, ಬೈರಂಬಾಡ, ಯಡೂರು, ಹಚ್ಚಿನಾಡು, ಕಣ್ಣಂಗಾಲ, ಇಂಜಲಗೆರೆ, ಪುಲಿಯೇರಿ, ಕುಂಬೇರಿ ಕಾರ್ಮಾಡು ಗ್ರಾಮಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾ ಚರಣೆಯನ್ನು ಅರಣ್ಯ ಇಲಾಖೆ ನಡೆಸಿತ್ತು.
ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಸಂದರ್ಭದಲ್ಲಿ ಕಾಡಾನೆಗಳ ಹಿಂಡಿನಲ್ಲಿದ್ದ ಒಂದು ಗುಂಪು ಕಣ್ಣಂಗಾಲ ಗ್ರಾಮದ ಕಾಫಿ ಬೆಳೆಗಾರ ಎಂ.ಪಿ. ಮುದ್ದಯ್ಯ ಎಂಬವರ ತೋಟದೊಳಗೆ ನುಸುಳಿದೆ. ಈ ಸಂದರ್ಭದಲ್ಲಿ ದಿಢೀರನೆ ಕಾಫಿ ತೋಟದೊಳಗೆ ಬಂದ ಕಾಡಾನೆಗಳನ್ನು ಕಂಡು ಕಾರ್ಮಿಕರು ಹೆದರಿ ದಿಕ್ಕಾಪಾಲಾಗಿ ಓಡಿದ್ದಾರೆ. ಕೆಲವರು ಕಾಡಾನೆ ದಾಳಿಯನ್ನು ತಪ್ಪಿಸಲು ಮರವನ್ನೇರಿ ಕೂದಲೆಳೆಯ ಅಂತರದಿAದ ಪಾರಾಗಿದ್ದಾರೆ ಎಂದು ತೋಟದ ಮಾಲೀಕ ಮುದ್ದಯ್ಯ ಮಾಹಿತಿ ನೀಡಿದ್ದಾರೆ.
ಶನಿವಾರದಂದು ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ಕಣ್ಣಂಗಾಲ ಹಾಗೂ ಬೈರಂಬಾಡ ಗ್ರಾಮಗಳ ಕಾಫಿ ತೋಟಗಳಲ್ಲಿ ಎರಡು ಗುಂಪುಗಳಲ್ಲಿ ಮರಿಯಾನೆಗಳು ಸೇರಿ ೨೫ಕ್ಕೂ ಹೆಚ್ಚು ಕಾಡಾನೆಗಳು ಕಂಡುಬAದಿವೆೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
(ಮೊದಲ ಪುಟದಿಂದ) ಕಾರ್ಯಾಚರಣೆ ಸಂದರ್ಭದಲ್ಲಿ ಕಾಡಾನೆಗಳು ಆದರೂ ಛಲಬಿಡದ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೆಲವು ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಿಸಿದರು. ಆದರೆ ಕಾಡಾನೆಗಳ ಗುಂಪಿನಲ್ಲಿ ಬೇರ್ಪಡಿಸಿರುವ ಕಾಡಾನೆಗಳು ಕಾಫಿ ತೋಟಗಳನ್ನು ಬಿಟ್ಟು ಕದಲದೇ ಇರುವುದು ಅರಣ್ಯ ಇಲಾಖಾಧಿಕಾರಿಗಳಿಗೆ ಸಮಸ್ಯೆಯಾಗಿರುತ್ತದೆ. ಆಹಾರಗಳನ್ನು ಅರಸಿಕೊಂಡು ಕಾಡಿನಿಂದ ನಾಡಿಗೆ ಲಗ್ಗೆ ಇಡುತ್ತಿರುವ ಕಾಡಾನೆಗಳು ಕಾಫಿ ತೋಟದ ಒಳಗೆ ದಾಂಧಲೆ ನಡೆಸುತ್ತಿವೆ. ಅಲ್ಲದೆ ಕೃಷಿ ಫಸಲುಗಳನ್ನು ನಾಶಗೊಳಿಸುತ್ತಾ ಮನೆಯ ಅಂಗಳದಲೇ ಓಡಾಡುತ್ತಿರುವುದು ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಇತ್ತೀಚಿಗೆ ಉಪಟಳ ನೀಡುತ್ತಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಸೆರೆ ಹಿಡಿದು ಸ್ಥಳಾಂತರ ಮಾಡಿದೆ, ಮತ್ತಷ್ಟು ಕಾಡಾನೆಗಳ ಕಾಫಿ ತೋಟಗಳಲ್ಲಿ ಬೀಟುಬಿಟ್ಟಿದ್ದು ಕಾರ್ಮಿಕರು ಕೆಲಸಕ್ಕೆ ಹಿಂದೇಟಾಕುತ್ತಿರುವುದು ಕಂಡುಬರುತ್ತಿದೆ. ಕಾಡಾನೆ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು ಶಾಶ್ವತ ಯೋಜನೆ ರೂಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ವೀರಾಜಪೇಟೆ ತಾಲೂಕು ಡಿಸಿಎಫ್ ಶರಣ ಬಸಪ್ಪ ಮಾರ್ಗದರ್ಶನದಲ್ಲಿ ಎಸಿಎಫ್ ನೆಹರೂ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಕಳ್ಳೀರ ದೇವಯ್ಯ, ಉಪವಲಯ ಅರಣ್ಯಾಧಿಕಾರಿ ದೇಯಂಡ ಸಂಜಿತ್ ಸೋಮಯ್ಯ, ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ಸಾರ್ವಜನಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ಎಚ್ಚರ ವಹಿಸಬೇಕು ಹಾಗೂ ಕಾರ್ಯಾಚರಣೆಗೆ ಇಲಾಖೆಯೊಂದಿಗೆ ಸಹಕರಿಸಬೇಕೆಂದು ವಲಯ ಅರಣ್ಯಾಧಿಕಾರಿ ಕೆ.ಎಂ. ದೇವಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.