ಸೋಮವಾರಪೇಟೆ, ಜು. ೧: ತಾಲೂಕು ಹೋಂ ಸ್ಟೇ ಅಸೋಸಿ ಯೇಷನ್ ವತಿಯಿಂದ ತಾಲೂಕಿ ನಲ್ಲಿರುವ ಪ್ರವಾಸಿ ತಾಣಗಳ ಸ್ವಚ್ಛತೆ, ಮಾಹಿತಿ ಫಲಕ ಅಳವಡಿಕೆಯೊಂದಿಗೆ ಪ್ರವಾಸಿಗರಿಗೆ ಹೆಚ್ಚಿನ ಸೌಕರ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು ಎಂದು ಅಸೋಸಿಯೇಷನ್ ಅಧ್ಯಕ್ಷ ಸಿ.ಕೆ. ರೋಹಿತ್ ಅವರು ತಿಳಿಸಿದರು.

ಇಲ್ಲಿನ ಪಿ.ಎನ್. ಹೆರಿಟೇಜ್‌ನಲ್ಲಿ ನಡೆದ ಅಸೋಸಿಯೇಷನ್ ಸಭೆಯಲ್ಲಿ ಮಾತನಾಡಿದ ಅವರು, ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ಸಂಬAಧ ಆಯಕಟ್ಟಿನ ಸ್ಥಳಗಳಲ್ಲಿ ಮಾಹಿತಿ ಫಲಕ ಅಳವಡಿಸುವುದು ಹಾಗೂ ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಇದರೊಂದಿಗೆ ಸ್ಥಳೀಯವಾಗಿ ಇರುವ ಹಲವಷ್ಟು ಪ್ರವಾಸಿ ತಾಣಗಳು ಅಭಿವೃದ್ಧಿ ವಂಚಿತವಾಗಿದ್ದು, ಇವುಗಳನ್ನು ಬೆಳಕಿಗೆ ತಂದು ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರದ ಗಮನ ಸೆಳೆಯುವುದಾಗಿ ಇದೇ ಸಂದರ್ಭ ಹೇಳಿದರು.

ಸಭೆಯಲ್ಲಿ ಭಾಗಿಯಾಗಿದ್ದ ಪ್ರವಾಸೋದ್ಯಮ ಇಲಾಖೆಯ ಕೌನ್ಸಿಲರ್ ಜತಿನ್ ಬೋಪಣ್ಣ ಅವರು, ಹೋಂ ಸ್ಟೇ ಪರವಾನಗಿ, ನವೀಕರಣ, ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.

ಸ್ಥಳೀಯವಾಗಿ ಅಭಿವೃದ್ಧಿ ಕಾಣಬೇಕಿರುವ ಪ್ರವಾಸಿ ತಾಣಗಳನ್ನು ಇಲಾಖೆಯ ಮೂಲಕ ಅಭಿವೃದ್ಧಿ ಪಡಿಸಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಸಭೆಯಲ್ಲಿ ಅಸೋಸಿಯೇಷನ್ ಉಪಾಧ್ಯಕ್ಷ ಯೋಗೇಶ್, ಕಾರ್ಯದರ್ಶಿ ಅಭಿನಂದ್, ಖಜಾಂಚಿ ಪ್ರೀತಂ, ಪ್ರವಾಸೋದ್ಯಮ ಇಲಾಖೆಯ ಅಶ್ವಥ್, ಸಕಲೇಶಪುರ ಹೋಂ ಸ್ಟೇ ಅಸೋಸಿಯೇಷನ್ ಅಧ್ಯಕ್ಷ ಕೆ.ಎಸ್. ಕುಮಾರಸ್ವಾಮಿ, ಕಾರ್ಯದರ್ಶಿ ಜಯಪ್ರಕಾಶ್, ಖಜಾಂಚಿ ನವೀನ್ ಹಾಜರಿದ್ದರು.